ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ವಿದ್ಯಾ ಸಂಸ್ಥೆಗಳು ಮತ್ತು ಹಳೆ ವಿದ್ಯಾರ್ಥಿ ಸಂಘದ ಮುತುವರ್ಜಿಯಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತ ಹಾರ್ಮೋನಿಯಂ ಮತ್ತು ಕೀ ಬೋರ್ಡ್ ವಾದನ ತರಗತಿ ಉದ್ಘಾಟನೆಯು ದಿನಾಂಕ 14 ಜುಲೈ 2025ರಂದು ಅಪರಾಹ್ನ 3-30 ಗಂಟೆಗೆ ಕಟೀಲು ಪದವಿ ಪೂರ್ವ ಕಾಲೇಜಿನ ಭಾರತೀ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಅನುವಂಶಿಕ ಅರ್ಚಕರಾದ ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಬಿ.ಎಸ್.ಎನ್.ಎಲ್. ಕೆ. ಸುರೇಶ್ ರಾವ್ ಸಿತ್ಲ ಮತ್ತು ಹಾರ್ಮೋನಿಯಂ ಗುರುಗಳಾದ ವಾಸು ಮಾಸ್ತರ್ ಇವರುಗಳು ಉಪಸ್ಥಿತರಿರಲಿದ್ದಾರೆ.