ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು, ಹಾಸನ ತಾಲೂಕು ಘಟಕ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ ಇವುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ 20 ಅಕ್ಟೋಬರ್ 2024 ಭಾನುವಾರ ಬೆಳಗ್ಗೆ 10-00 ಗಂಟೆಗೆ ಹಾಸನದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಮುದಾಯ ಭವನದಲ್ಲಿ ‘ಹಾಸನ ದಸರಾ ಕವಿಗೋಷ್ಠಿ’ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಧ್ಯಕ್ಷೆ ಕೆ.ಸಿ. ಗೀತಾ ತಿಳಿಸಿದ್ದಾರೆ.
ನಾಡಿನ ಪ್ರಸಿದ್ಧ ಸಾಹಿತಿ ಬಾನು ಮುಸ್ತಾಕ್ ಕವಿಗೋಷ್ಠಿ ಉದ್ಘಾಟಿಸಲಿದ್ದು, ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಕವಿ ಚಿನ್ನೇನಹಳ್ಳಿ ಸ್ವಾಮಿ ಕವಿಗೋಷ್ಠಿಯ ಆಶಯ ನುಡಿಗಳನ್ನಾಡುವರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಡಾ. ವೈ.ಎಸ್. ವೀರಭದ್ರಪ್ಪ, ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ, ವೇದಿಕೆಯ ತಾಲ್ಲೂಕು ಅಧ್ಯಕ್ಷೆ ಕೆ.ಸಿ. ಗೀತಾ, ಮನೆ ಮನೆ ಕವಿಗೋಷ್ಠಿ ಸಂಚಾಲಕ ಗೊರೂರು ಅನಂತರಾಜು, ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆ ರಾಜೇಶ್ವರಿ ಹುಲ್ಲೇನಹಳ್ಳಿ, ಅರಸೀಕೆರೆ ತಾಲ್ಲೂಕು ಅಧ್ಯಕ್ಷ ಕೆ.ಎಸ್. ಮಂಜುನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಹಾಸನ ದಸರಾ ಕವಿಗೋಷ್ಠಿಯಲ್ಲಿ ಲಲಿತ ಎಸ್. ಸಕಲೇಶಪುರ, ಜಯಶಂಕರ್ ಬೆಳಗುಂಬ ಹಾಸನ, ರೇಖಾ ಪ್ರಕಾಶ್ ಹಾಸನ, ಚಂದ್ರಕಲಾ ಆಲೂರು, ಹೇಮರಾಗ ಹಾಸನ, ಎಚ್.ಬಿ. ಚೂಡಾಮಣಿ ಹಾಸನ, ಅಮೃತ್ ಅರಸೀಕೆರೆ, ನೀಲಾವತಿ ಸಿ.ಎನ್. ಹಾಸನ, ಪಲ್ಲವಿ ಬೇಲೂರು, ಗಿರಿಜಾ ನಿರ್ವಾಣಿ ಹಾಸನ, ರಕ್ಷಾ ಕೆ.ಟಿ. ಹಾಸನ, ಮಲ್ಲೇಶ್ ಜಿ. ಹಾಸನ, ಸೈಫುಲ್ಲ ಡಿ.ಎಂ. ಅರಸೀಕೆರೆ, ಧರ್ಮ ಕೆರಲೂರು ಆಲೂರು, ಪದ್ಮಾವತಿ ವೆಂಕಟೇಶ್ ಹಾಸನ, ಭಾರತಿ ಎಚ್.ಎನ್. ಹಾಸನ, ವಸುಮತಿ ಜೈನ್ ಶ್ರವಣಬೆಳಗೊಳ, ರುಮಾನಾ ಜಬೀರ್ ಹಾಸನ, ಯಮುನಾವತಿ ಎಚ್.ಕೆ. ಹಾಸನ, ಎ.ಎಚ್. ಬೋರೇಗೌಡ ಅರಸೀಕೆರೆ, ಬಿ.ವಿ. ವೇದಶ್ರೀ ನಿಶಿತ್ ಹಾಸನ, ಅರುಣ್‌ಗೌಡ ಸಕಲೇಶಪುರ, ರಾಣಿ ಚರಾಶ್ರೀ ಹಾಸನ, ನಿರಂಜನ್ ಎ.ಸಿ. ಬೇಲೂರು ಮುಂತಾದವರು ಭಾಗವಹಿಸಲಿದ್ದಾರೆ.
ರಾಜ್ಯ ಕೋಶಾಧ್ಯಕ್ಷ ಎಚ್.ಎಸ್. ಬಸವರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸು ಸಮುದ್ರವಳ್ಳಿ, ರಾಜ್ಯ ಸಹ ಕಾರ್ಯದರ್ಶಿ ದೇಸು ಆಲೂರು ಇವರುಗಳು ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ. ಸಾಹಿತ್ಯಾಸಕ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಾಲೂಕು ಅಧ್ಯಕ್ಷೆ ಕೆ.ಸಿ. ಗೀತಾ ತಿಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಕೆ.ಸಿ. ಗೀತಾ 9880889885 ಸಂಪರ್ಕಿಸಬಹುದಾಗಿದೆ.