ಬೆಂಗಳೂರು : ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ.) ಸಂಸ್ಥೆಯ ಆಶ್ರಯದಲ್ಲಿ ಬೆಂಗಳೂರಿನ ಅರಮನೆ ಮೈದಾನಿನಲ್ಲಿ ದಿನಾಂಕ 27 ಡಿಸೆಂಬರ್ 2024ರಿಂದ 29 ಡಿಸೆಂಬರ್ 2024ರಂದು ಜರಗಿದ ‘ತೃತೀಯ ವಿಶ್ವ ಹವ್ಯಕ ಸಮ್ಮೇಳನ’ದ ಉದ್ಘಾಟನಾ ಸಮಾರಂಭದಲ್ಲಿ ‘ಹವಿ-ಸವಿ ಕೋಶ’ ಎಂಬ ಪ್ರಪ್ರಥಮ ಬೃಹತ್ ಹವ್ಯಕ-ಕನ್ನಡ ನಿಘಂಟನ್ನು ರಚಿಸಿದ ಕಾಸರಗೋಡಿನ ಹಿರಿಯ ಸಾಹಿತಿ, ಶಿಕ್ಷಣ ತಜ್ಞ ಶ್ರೀ ವಿ.ಬಿ. ಕುಳಮರ್ವ ಕುಂಬ್ಳೆ ಇವರನ್ನು ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರಗಳ ಸಾಧನೆಗಾಗಿ ‘ಹವ್ಯಕ ಸಾಧಕ ರತ್ನ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು.