ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಆಯೋಜಿಸಿದ್ದ ಕಲಾ ಪ್ರತಿಭೋತ್ಸವದ ವಾದ್ಯ ಸಂಗೀತ ವಿಭಾಗದಲ್ಲಿ ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಹಿಮಾಂಗಿ ಡಿ. ಉಳ್ಳಾಲ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಮೈಸೂರು ರಂಗಾಯಣ ಕಲಾ ಮಂದಿರದಲ್ಲಿ ನಡೆದ ವಿಭಾಗ ಮಟ್ಟದ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಸುರತ್ಕಲ್‌ನ ಗೋವಿಂದ ದಾಸ್ ಕಾಲೇಜಿನ ಅಂತಿಮ ವರ್ಷದ ಡಿಗ್ರಿ ವಿದ್ಯಾರ್ಥಿನಿಯಾಗಿರುವ ಇವರು, ವಿದ್ವಾನ್ ಮಾಧವ ಆಚಾರ್ಯ ಉಡುಪಿ ಇವರ ಶಿಷ್ಯೆ. ಪ್ರಸಿದ್ದ ತಬಲಾ ವಾದಕ ದೀಪಕ್ ರಾಜ್ ಉಳ್ಳಾಲ ಹಾಗೂ ಧನಲಕ್ಷ್ಮಿ ದಂಪತಿಗಳ ಸುಪುತ್ರಿಯಾದ ಇವರು ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
