ಪುತ್ತೂರು: ಪುತ್ತೂರಿನ ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ .(ಸ್ವಾಯತ್ತ) ಕಾಲೇಜಿನ ಸುವರ್ಣ ಮಹೋತ್ಸವ ಸಭಾಭನದಲ್ಲಿ ಹಿಂದಿ ದಿವಸ್ ಸಮಾರೋಹ್ ಹಾಗೂ ಡಾ. ಶ್ರೀಧರ ಎಚ್.ಜಿ. ಇವರ ‘ಶಿಖಂಡಿ’ ಪುಸ್ತಕವನ್ನು ಡಾ. ದುರ್ಗಾರತ್ನ ಸಿ. ಅವರು ಹಿಂದಿಯಲ್ಲಿ ಅನುವಾದಿಸಿದ ಕೃತಿಯ ಲೋಕಾರ್ಪಣಾ ಸಮಾರಂಭವು ದಿನಾಂಕ 25 ಸೆಪ್ಟೆಂಬರ್ 2024 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಮಂಗಳೂರು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಇದರ ಹಿಂದಿ ವಿಭಾಗ ಮುಖ್ಯಸ್ಥರಾದ ಡಾ. ಮುಕುಂದ ಪ್ರಭು ಮಾತನಾಡಿ “ಯಾವುದೇ ರಾಜ್ಯ, ರಾಷ್ಟ್ರ ಭಾಷೆಯ ಹೊರತಾಗಿ ಹಿಂದಿಗೆ ಸಮಸ್ತ ರಾಷ್ಟ್ರವನ್ನು ಒಗ್ಗೂಡಿಸುವ ಶಕ್ತಿ ಇದೆ. ಎಂದರು.
ಕಾರ್ಯಕ್ರಮದ ಅಧ್ಯಕತೆ ವಹಿಸಿದ್ದ ಕಾಲೇಜಿನ ಶ್ರೀಪತಿ ಕಲ್ಲೂರಾಯ ಮಾತನಾಡಿ “ಸಮಯ ಬದಲಾಗುತ್ತಾ ಹೋದಂತೆ ಹಿಂದಿ ಭಾಷೆಯ ಜ್ಞಾನವನ್ನು ಜನರು ಮರೆಯುತ್ತಿದ್ದಾರೆ. ಮಾತನಾಡಲು ಮಾತ್ರ ಭಾಷೆಯನ್ನು ಬಳಕೆ ಮಾಡದೆ, ಶೈಕ್ಷಣಿಕ ತಳಹದಿಯಲ್ಲಿ ಬಳಕೆ ಮಾಡಿದಾಗ ಅದು ಅದರ ಹೊಳಪು ಕಳೆದುಕೊಳ್ಳುವುದಿಲ್ಲ.” ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳೀಕೃಷ್ಣ ಕೆ. ಎನ್., ವಿವೇಕಾನಂದ ಸ್ಥಾಯತ್ತ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ ಎಚ್. ಜಿ., ಕಾಲೇಜಿನಾ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಉಪ್ಪಿತರಿದ್ದರು. ಸುಮಶ್ರೀ ಮತ್ತು ವಾಣಿಶ್ರೀ ಪ್ರಾರ್ಥಿಸಿ, ಕಲಾ ವಿಭಾಗದ ಡೀನ್ ಮತ್ತು ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ದುರ್ಗಾರತ್ನ ಸಿ. ಸಾಗತಿಸಿ, ವಂದಿಸಿದರು. ಅಮೃತ ಮತ್ತು ಅಪೂರ್ವ ಕಾರ್ಯಕ್ರಮ ನಿರ್ವಹಿಸಿದರು.