ಉಡುಪಿ : ಪೂರ್ಣಪ್ರಜ್ಞ (ಸ್ವಾಯತ್ತ) ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಆಶ್ರಯದಲ್ಲಿ ಹಿಂದಿ ವಿಭಾಗದ ವತಿಯಿಂದ ‘ಹಿಂದಿ ದಿವಸ’ ಆಚರಣೆಯನ್ನು ದಿನಾಂಕ 27 ಸೆಪ್ಟೆಂಬರ್ 2025ರಂದು ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀಮತಿ ಕೃತಿಕಾ ಪಿ. ಶೆಣೈಯವರು ಭಾಷೆಯ ಉತ್ಪತ್ತಿ ಮತ್ತು ವಿಕಾಸದ ಕುರಿತು ಪ್ರೇರಣಾದಾಯಕವಾಗಿ ಮಾತನಾಡಿ, “ಭಾಷೆ ಮನುಷ್ಯನ ಜೀವನದಲ್ಲಿ ಅತೀವ ಪ್ರಮುಖ ಪಾತ್ರ ವಹಿಸುವುದನ್ನು ಸ್ಪಷ್ಟಪಡಿಸಿದರು. ಅವರು ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಭಾಷಾಜ್ಞಾನ ಅತ್ಯಂತ ಅವಶ್ಯಕವಾಗಿದ್ದು, ರಾಷ್ಟ್ರದ ಏಕತೆಯನ್ನು ಬಲಪಡಿಸುವಲ್ಲಿ ಭಾಷೆಯ ಮಹತ್ವ ಅನನ್ಯ” ಎಂದು ವಿವರಿಸಿದರು. ವಿಶೇಷವಾಗಿ ನಮ್ಮ ದೇಶದ ರಾಜ್ಯಭಾಷೆಯಾಗಿರುವ ಹಿಂದಿ ಭಾಷೆಯ ಕುರಿತು ವಿದ್ಯಾರ್ಥಿಗಳಲ್ಲಿ ಗೌರವ, ಅರಿವು ಮತ್ತು ಹೆಮ್ಮೆಯನ್ನು ಬೆಳೆಸುವಂತೆ ಕರೆ ನೀಡಿದರು.
ಹಿಂದಿ ದಿವಸದ ಅಂಗವಾಗಿ ವಿವಿಧ ಸ್ಪರ್ಧೆಗಳು ಆಯೋಜಿಸಲ್ಪಟ್ಟಿದ್ದು, ವಿಜೇತರನ್ನು ಗೌರವಿಸಲು ಬಹುಮಾನ ವಿತರಣೆಯನ್ನು ಮುಖ್ಯ ಅತಿಥಿಗಳಿಂದ ನೆರವೇರಿಸಲಾಯಿತು. ಕಾರ್ಯಕ್ರಮಕ್ಕೆ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಆನಂದ ರಾಯಮಾನೆ ಇವರು ಅಧ್ಯಕ್ಷತೆ ವಹಿಸಿದ್ದರು. ವಿಭಾಗದ ಅಧ್ಯಾಪಕಿ ಭೈರವಿ ಪಾಂಡೆ ಹಾಗೂ ಇತರ ಅಧ್ಯಾಪಕರು ಉಪಸ್ಥಿತರಿದ್ದರು.