ಬೆಂಗಳೂರು : ಸ್ವಾಯಕ್ಷೇಮ ಫೌಂಡೇಷನ್, ಶ್ರೀ ಶಂಕರ ಕ್ಯಾನ್ಸರ್ ಫೌಂಡೇಷನ್ ಮತ್ತು ಅನೂರ್ ಅನಂತಕೃಷ್ಣ ಶರ್ಮ ಇವರ ಸಹಯೋಗದಲ್ಲಿ ‘ಸ್ವರೂಪಚಾರ’ ಚಿಕಿತ್ಸಕ ಸಂಗೀತ ಕಛೇರಿ ಸರಣಿಯನ್ನು ದಿನಾಂಕ 07 ಜೂನ್ 2025ರಂದು ಸಂಜೆ 4-30 ಗಂಟೆಗೆ ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಶಂಕರ ಕ್ಯಾನ್ಸರ್ ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರಿನ ಶ್ರೀ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಶ್ರೀಮತಿ ಮೇಧಾ ಭಟ್ ಇವರ ಹಾಡುಗಾರಿಕೆಗೆ ಹರೀಶ್ ಕರ್ಣಂ ಇವರು ಹಾರ್ಮೋನಿಯಂನಲ್ಲಿ ಹಾಗೂ ವಿಘ್ನೇಶ್ ಕಾಮತ್ ಇವರು ತಬಲಾದಲ್ಲಿ ಸಾಥ್ ನೀಡಲಿದ್ದಾರೆ.