ಮಂಗಳೂರು : ಧ್ಯಾನಸಂಗೀತ ಅಕಾಡೆಮಿ ಕಲಾ ಟ್ರಸ್ಟ್ ಇದರ ವಾರ್ಷಿಕೋತ್ಸವದ ಅಂಗವಾಗಿ ಒಂದು ದಿನದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತೋತ್ಸವ ಕಾರ್ಯಕ್ರಮವು 25 ಆಗಸ್ಟ್ 2024ರಂದು ಮಂಗಳೂರಿನಲ್ಲಿರುವ ಉರ್ವಾಸ್ಟೋರಿನ ತುಳುಭವನದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ 10.30ಕ್ಕೆ ಪ್ರಾರಂಭವಾಗಲಿರುವ ಈ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಾದ ಮುಂಬೈನ ಪಂ. ರಾಮ್ ದೇಶಪಾಂಡೆ ಹಾಗೂ ಮೈಸೂರಿನ ವಿದುಷಿ ಶ್ರೀಮತಿ ದೇವಿ ಇವರಿಂದ ಹಿಂದುಸ್ತಾನಿ ಗಾಯನ ಕಚೇರಿ ನಡೆಯಲಿದೆ. ಇವರಿಗೆ ಹಾರ್ಮೋನಿಯಂನಲ್ಲಿ ಹೇಮಂತ್ ಭಾಗವತ್ ಮತ್ತು ಪ್ರಸಾದ್ ಕಾಮತ್, ತಬಲಾದಲ್ಲಿ ಗೋವಾದ ಡಾ. ಉದಯ್ ಕುಲಕರ್ಣಿ ಮತ್ತು ರಾಜೇಶ್ ಶ್ರೀನಿವಾಸ್ ಭಾಗವತ್ ಸಹಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅಕಾಡೆಮಿಯ ವಿದ್ಯಾರ್ಥಿಗಳಿಂದ ಲಘು ಶಾಸ್ತ್ರೀಯ ಸಂಗೀತ ವೈವಿಧ್ಯ ನಡೆಯಲಿದೆ.
ಟ್ರಸ್ಟಿನ ಶ್ರೀಮತಿ ಲೋಲಾಕ್ಷಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು, ಪಂ. ರಾಮ್ ದೇಶಪಾಂಡೆ ದೀಪ ಬೆಳಗಿಸಿ ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ., ಎಂ. ಆರ್. ಪಿ. ಎಲ್. ಜನರಲ್ ಮ್ಯಾನೇಜರ್ ಮಂಜುನಾಥ ಹೆಚ್. ವಿ., ಸಂಗೀತ ಪೋಷಕರಾದ ಶ್ರೀಮತಿ ಶ್ರೇಯಾ ಕಿರಣ್ ಶೆಣೈ ಮತ್ತು ಉರ್ವ ಕೊರಗಜ್ಜ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ರಾಜೇಶ್ ಉರ್ವ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರಿಗೆ ಮುಕ್ತ ಪ್ರವೇಶವಿದೆ.


