ಪೆರ್ಡೂರು : ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ (ರಿ) ಹತ್ತಾರು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ದಿನಾಂಕ 28 ಡಿಸೆಂಬರ್ 2025ರ ರವಿವಾರದಂದು ದ್ವಿತೀಯ ಬಾರಿಗೆ ಉಡುಪಿ ಜಿಲ್ಲೆಯ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ‘ಹಿರಿಯರೊಟ್ಟುಗೊಂಜಿ ದಿನ’ ಕಾರ್ಯಕ್ರಮ ಆಯೋಜಿಸಿದೆ.
ಬದುಕಿನುದ್ದಕ್ಕೂ ತನ್ನವರಿಗಾಗಿ ದುಡಿದು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಯೌವನವನ್ನು ಸವೆಸಿ ಬದುಕಿನ ಮುಸ್ಸಂಜೆಯಲ್ಲಿರುವ ಜೀವಗಳಿಗೆ ಪ್ರೀತಿಯ, ಮಮತೆಯ, ಸಂತೃಪ್ತಿಯ ಭಾವನೆ ಮೂಡಿಸುವುದು ಕಿರಿಯರಾದ ನಮ್ಮೆಲ್ಲರ ಕರ್ತವ್ಯ. ಅವರು ಹಾಕಿಕೊಟ್ಟ ಬದುಕಿನ ಅಡಿಪಾಯದಿಂದಾಗಿ ನಾವಿಂದು ನೆಮ್ಮದಿಯ ಗೂಡು ಕಟ್ಟಿಕೊಂಡಿದ್ದೇವೆ. ನಮ್ಮ ಬಾಲ್ಯದಲ್ಲಿ ಅವರು ತೋರಿದ ಪ್ರೀತಿ, ಕಾಳಜಿ, ಮಮಕಾರವನ್ನು ನಾವಿಂದು ಅವರಿಗೆ ಮರಳಿಸಬೇಕಾಗಿದೆ. ಎಲ್ಲ ಗೌರವಾನ್ವಿತ ಹಿರಿಯ ನಾಗರಿಕರನ್ನು ದಿನವಿಡೀ ರಂಜಿಸಿ ಅವರ ಮನಸ್ಸಂತೋಷ ಪಡಿಸಿ ತನ್ಮೂಲಕ ಹಿರಿಯರ ಸೇವೆಗೈಯುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಾಡು, ನೃತ್ಯ, ಛದ್ಮವೇಷ, ಮೋಜಿನ ಆಟಗಳು, ಹಾಸ್ಯ, ಸ್ಕಿಟ್ ಐದು ನಿಮಿಷ (ಸಹ ಕಲಾವಿದರಾಗಿ ಮನೆಯ ಸದಸ್ಯರು ಭಾಗವಹಿಸಬಹುದು) ಇವುಗಳೊಂದಿಗೆ ಹಾಗೂ ತಮ್ಮಲ್ಲಿರುವ ವಿಶೇಷ ಪ್ರತಿಭೆಯನ್ನು ಪ್ರದರ್ಶಿಸುವ ಇಚ್ಛೆಯುಳ್ಳ ಹಿರಿಯ ನಾಗರಿಕರು ಈ ಕೆಳಕಂಡ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಿ ಡಿಸೆಂಬರ್ 15ರೊಳಗೆ ನೋಂದಾಯಿಸಿಕೊಂಡಲ್ಲಿ ಕಾರ್ಯಕ್ರಮ ಆಯೋಜನೆಗೆ ನೆರವಾಗುವುದು.
ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ವಯಸ್ಸಿನ ಯಾವುದೇ ದಾಖಲೆಯೊಂದಿಗೆ ಭಾಗವಹಿಸಬಹುದು. ಹಿರಿಯ ನಾಗರಿಕರಿಗೆ ಸ್ಪರ್ಧೆಗಳಿದ್ದು ವಿಜೇತರಿಗೆ ಬಹುಮಾನ ನೀಡಲಾಗುವುದು. ಮಾಹಿತಿಗಾಗಿ ಸಂಪರ್ಕಿಸಲು 9743579059, 9900408243, 9743493177 ಸಂಪರ್ಕಿಸಿ.

