ಬೆಂಗಳೂರು : ಲಯನ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 317 ಇವರು ಆಯೋಜಿಸಿದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ದಿನಾಂಕ 16 ಮಾರ್ಚ್ 2025ರಂದು ಬೆಂಗಳೂರಿನ ವಿಶ್ವೇಶ್ವರಪುರದಲ್ಲಿರುವ ಮನಂದಿ ನಂಜುಂಡ ಶೆಟ್ಟಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದು ಹಮ್-ಯು.ಎನ್. ಉಮೆನ್ ಏಷ್ಯಾ ಪೆಸಿಫಿಕ್ ಲೀಡಿಂಗ್ ಪ್ರಮ್ ದಿ ಪ್ರಂಟ್ ಪುಸ್ತಕದಲ್ಲಿ ಸ್ಥಾನ ಪಡೆದ ಹಾಗೂ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜರಾದ ಯಕ್ಷ ಸಾಧಕಿ ಪ್ರಿಯಾಂಕ ಕೆ. ಮೋಹನ್ ಇವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಗವರ್ನರ್ ಲಯನ್ ಎನ್. ಮೋಹನ್ ಕುಮಾರ್, ಲಯನ್ ಪ್ರೇಮ ಮೋಹನ್ ಕುಮಾರ್, ಸೀನಿಯರ್ ಉಪಾಧ್ಯಕ್ಷರಾದ ಶ್ರೀಮತಿ ಉಮಾರೆಡ್ಡಿ, ಮಹಿಳಾ ಸಬಲೀಕರಣಕ್ಕಾಗಿ ಡಿ.ಸಿ. ಲಯನ್ ರಾಜೇಶ್ವರಿ ವಸಂತಯ್ಯ, ಕಾರ್ಯಕ್ರಮದ ಸಂಯೋಜಕಿ ಲಯನ್ ಜ್ಯೋತಿ ಶ್ರೀಹರಿ, ಲಯನ್ ಡಾ. ಜಿ. ಮೋಹನ್, ಲಯನ್ ಶಾರದ ಮೋಹನ್ ಉಪಸ್ಥಿತರಿದ್ದರು.