ಉಡುಪಿ : ತೆಕ್ಕಟ್ಟೆ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ನೇತೃತ್ವದ ಅಭಿನಂದನೆ ಕಾರ್ಯಕ್ರಮ ದಿನಾಂಕ 13 ಡಿಸೆಂಬರ್ 2024ರಂದು ಗುರು ಬನ್ನಂಜೆ ಸಂಜೀವ ಸುವರ್ಣರ ನಿವಾಸದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಬನ್ನಂಜೆ ಸಂಜೀವ ಸುವರ್ಣರನ್ನು ಗೌರವಿಸಿದ ತೆಕ್ಕಟ್ಟೆ ಯಶಸ್ವೀ ಕಲಾವೃಂದದ ಗುರು ಲಂಬೋದರ ಹೆಗಡೆ ಮಾತನಾಡಿ “ಗುರು ಬನ್ನಂಜೆ ಸಂಜೀವ ಸುವರ್ಣರಿಗೆ ಸಲ್ಲಲೇಬೇಕಾದ ಪ್ರಶಸ್ತಿಗಳನೇಕವು ಅರ್ಜಿ ಸಲ್ಲಿಸದೇ ಗುರುಗಳನ್ನು ಹುಡುಕಿ ಬಂದಿದೆ. ಅದರಲ್ಲಿ ಬಹು ಪ್ರಾಮುಖ್ಯವಾದದ್ದು ಕರ್ನಾಟಕ ಯಕ್ಷಗಾನ ಅಕಾಡೆಮಿ ಕೊಡಮಾಡಿದ ಪ್ರಶಸ್ತಿ. ಇಂತಹ ಗುರುಗಳನ್ನು ಅಭಿನಂದಿಸಬೇಕಾದದ್ದು ನಮ್ಮಂತಹ ಸಂಸ್ಥೆಯ ಕರ್ತವ್ಯ. ಪ್ರಶಸ್ತಿಗೆ ಭಾಜನರಾದವರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನಾರೋಗ್ಯದ ಕಾರಣದಿಂದ ಗುರುಗಳಿಗೆ ಅಸಾಧ್ಯವಾಗಿತ್ತು. ಆದರೆ ಇಂದು ಗುರು ಸನ್ನಿಧಿಯಲ್ಲಿ ಗೌರವಿಸಿ, ಅಭವಂದಿಸಿದ ಭಾಗ್ಯ ನಮ್ಮ ಪಾಲಿಗೆ ಬಂದಿದೆ.”ಎಂದರು
ಸಮಾರಂಭದಲ್ಲಿ ಸಂಜಿವ ಸುವರ್ಣ ದಂಪತಿಗಳು, ಉದ್ಯಮಿ ಗೋಪಾಲ ಪೂಜಾರಿ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.