Subscribe to Updates

    Get the latest creative news from FooBar about art, design and business.

    What's Hot

    ಧಾರವಾಡದ ಸೃಜನಾ ರಂಗಮಂದಿರದಲ್ಲಿ ‘ಸ್ತ್ರೀ ನಾಟಕೋತ್ಸವ’ | ಜುಲೈ 06 ಮತ್ತು 07

    July 1, 2025

    ಶಕ್ತಿನಗರದ ಕಲಾಂಗಣದಲ್ಲಿ ‘ಅನುವಾದ ಕಾರ್ಯಾಗಾರ’

    July 1, 2025

    ಬೆಂಗಳೂರಿನಲ್ಲಿ ರಂಗರಥ ವತಿಯಿಂದ ‘ಅಭಿನಯ ಕಾರ್ಯಾಗಾರ’ | ಜುಲೈ 07ರಿಂದ 24

    July 1, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕನ್ನಡ ಸಾಹಿತ್ಯ ಪರಿಷತ್ ಗಡಿನಾಡ ಘಟಕದಿಂದ ಪಿ. ಎಸ್. ಪುಣ್ಚಿತ್ತಾಯರಿಗೆ ಸನ್ಮಾನ 
    Drawing

    ಕನ್ನಡ ಸಾಹಿತ್ಯ ಪರಿಷತ್ ಗಡಿನಾಡ ಘಟಕದಿಂದ ಪಿ. ಎಸ್. ಪುಣ್ಚಿತ್ತಾಯರಿಗೆ ಸನ್ಮಾನ 

    November 25, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಮುಳ್ಳೇರಿಯ : ಕನ್ನಡ ಭಾಷೆ, ಸಂಸ್ಕೃತಿಗೆ ಅಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ ಕನ್ನಡ ಸಾಹಿತ್ಯ ಪರಿಷತ್‌ ಇದರ ಕೇರಳ ಗಡಿನಾಡ ಘಟಕದ ‘ಸಾಹಿತ್ಯ ಪರಿಷತ್‌ ನಡಿಗೆ ಹಿರಿಯ ಸಾಧಕರ ಕಡೆಗೆ’ ಎಂಬ ಕಾರ್ಯಕ್ರಮದ ಅಂಗವಾಗಿ ಅಂತಾರಾಷ್ಟ್ರೀಯ ಖ್ಯಾತಿಯ ಹಿರಿಯ ಚಿತ್ರ ಕಲಾವಿದ ಹಾಗೂ ಜಲವರ್ಣ ಮಾಂತ್ರಿಕ ಪುಂಡೂರು ಶಂಕರನಾರಾಯಣ ಪುಣ್ಚಿತ್ತಾಯ (ಪಿ. ಎಸ್. ಪುಣಿಂಚತ್ತಾಯ) ಅವರನ್ನು ಕಾರಡ್ಕ ಬಳಿಯಲ್ಲಿರುವ ಅವರ ನಿವಾಸ ಕಾಂಚನಗಂಗಾದಲ್ಲಿ ದಿನಾಂಕ 23 ನವೆಂಬರ್ 2024ರ ಶನಿವಾರದಂದು ಅಭಿನಂದಿಸಲಾಯಿತು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ ಇದರ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ  ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಇವರು ಪಿ.ಎಸ್. ಪುಣಿಂಚತ್ತಾಯ ಮತ್ತು ಭಾರತಿ ಪುಣಿಂಚತ್ತಾಯ ದಂಪತಿಗೆ ಶಾಲು ಹೊದೆಸಿ ಫಲಪುಷ್ಪ ಸ್ಮರಣಿಕೆ ನೀಡಿ ಅಭಿನಂದಿಸಿದರು.
    ಅಭಿನಂದನಾ ಭಾಷಣ ಮಾಡಿದ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷರಾದ ಪ್ರೊ. ಪಿ. ಎನ್. ಮುಡಿತ್ತಾಯ ಮಾತನಾಡಿ “ಜಲವರ್ಣ, ತೈಲವರ್ಣ ಎರಡರಲ್ಲೂ ಪಿ. ಎಸ್. ಪುಣ್ಚಿತ್ತಾಯರು ಅಪಾರ ಸಾಧನೆ ಮಾಡಿದ್ದಾರೆ. ಕಾಸರಗೋಡಿನ ಕೀರ್ತಿಯನ್ನು ದೇಶ ವಿದೇಶಗಳಿಗೆ ಪಸರಿಸಿದ್ದಾರೆ.” ಎಂದು ಹೇಳಿದರು.
    ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಪಿ. ಎಸ್. ಪುಣ್ಚಿತ್ತಾಯ ಕಾಸರಗೋಡಿನಲ್ಲಿ ನಡೆಯುತ್ತಿರುವ ಕನ್ನಡದ ಅವಗಣನೆಗೆ ಕಳವಳ ವ್ಯಕ್ತಪಡಿಸಿ, “ಕನ್ನಡ ಸಾಹಿತ್ಯ ಪರಿಷತ್‌ ಕೇರಳ ಗಡಿನಾಡ ಘಟಕವು ಕಾಸರಗೋಡಿನ ಕನ್ನಡವನ್ನು ಇನ್ನಷ್ಟು ಎತ್ತರಕ್ಕೇರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು.” ಎಂದು ಕರೆ ನೀಡಿದರು.
    ಕ. ಸಾ. ಪ. ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ,  ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳೆ ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರಿಗೆ ಆಹ್ವಾನ | ಡಿಸೆಂಬರ್ 15
    Next Article ಮಡಿಕೇರಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜನಪದ ನೃತ್ಯ ಸ್ಪರ್ಧೆ ಹಾಗೂ ಟಿ. ಪಿ. ರಮೇಶ್ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭ | ನವೆಂಬರ್ 30
    roovari

    Add Comment Cancel Reply


    Related Posts

    ಕಾಸರಗೋಡಿನಲ್ಲಿ ಕನ್ನಡ ಚುಟುಕು ಸಾಹಿತ್ಯ ಅಭಿಯಾನದ 2ನೇ ಕಾರ್ಯಕ್ರಮ

    June 30, 2025

    ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ

    June 26, 2025

    ದೇಲಂಪಾಡಿ ಸರಕಾರಿ ಪ್ರೌಢಶಾಲೆಯಲ್ಲಿ ‘ಕನ್ನಡದ ನಡಿಗೆ ಶಾಲೆಯ ಕಡೆಗೆ’ ಕನ್ನಡ ಸಾಹಿತ್ಯ ಅಭಿಯಾನ

    June 23, 2025

    ರಾಜೇಶ್ವರಿ ಕುಡುಪು ಇವರ ‘ಕಲಾಸಂಪದ’ ಪುಸ್ತಕ ಬಿಡುಗಡೆ

    May 17, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.