ಬೆಂಗಳೂರು : ಶ್ರೀಮತಿ ರಜನಿ ಮತ್ತು ಶಶಿಕಾಂತ ಆಚಾರ್ಯ ಅರ್ಪಿಸುವ ಯಕ್ಷಫೌಂಡೇಷನ್ ಬೆಂಗಳೂರು ಇವರ ಯಕ್ಷಗಾನ ನವ್ಯ ನಿನಾದ – 3ನೇ ಪ್ರಸ್ತುತಿ ಕಾರ್ಯಕ್ರಮದ ಅಂಗವಾಗಿ ಕೋಟ ಸುದರ್ಶನ ಉರಾಳ ಇವರನ್ನು ಬೆಂಗಳೂರಿನ ಎನ್. ಆರ್. ಕಾಲೋನಿಯ ಅಶ್ವಥ್ ಕಲಾಭವನದಲ್ಲಿ ದಿನಾಂಕ 19 ಅಕ್ಟೋಬರ್ 2024ರಂದು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು
ಕಳೆದ ಮೂರುವರೆ ದಶಕಗಳಿಂದ ಕರಾವಳಿ ಶ್ರೀಮಂತ ಕಲೆ ಯಕ್ಷಗಾನದ ಹಿಮ್ಮೇಳ – ಮುಮ್ಮೇಳದಲ್ಲಿ ಅನುಭವ ಹೊಂದಿ, ಯಕ್ಷ ಪ್ರಸಾಧನ ಕಲೆಯಲ್ಲಿ ಪರಂಪರೆಯೊಂದಿಗೆ ಹೊಸತನ ತೋರಿ, ಯಕ್ಷ ಗುರುಗಳಾಗಿ ನೂರಾರು ಹವ್ಯಾಸಿ ಕಲಾವಿದರಿಗೆ, ಮಕ್ಕಳಿಗೆ ಗೆಜ್ಜೆ ಕಟ್ಟಿ, ಹೆಜ್ಜೆಯಿಡುವಂತೆ ಮಾಡಿ, ಸುದ್ದಿ, ಲೇಖನ, ವಿಮರ್ಶೆಗಳ ಬರಹಗಾರರಾಗಿ ಬೆಂಗಳೂರಿನ ಕೆ. ಮೋಹನರ ಯಕ್ಷದೇಗುಲದ ಮೂಲಕ ಕರ್ನಾಟಕದ ಸಾವಿರಕ್ಕೂ ಹೆಚ್ಚು ಹಳ್ಳಿ, ಹಳ್ಳಿಗಳಲ್ಲದೆ ದೇಶ, ವಿದೇಶಗಳಲ್ಲಿ ಯಕ್ಷ ಕಂಪು ಪಸರಿಸಿದ ಇವರ ಸಾಧನೆಯನ್ನು ಗುರುತಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ನಿವೃತ್ತ ವೈದ್ಯಾಧಿಕಾರಿ ಡಾ. ಸೂರ್ಯನಾರಾಯಣ ಆಚಾರ್ಯ, ಜ್ಯೋತಿರ್ಗಮಯ ಸಂಸ್ಥೆಯ ಸ್ಥಾಪಕರಾದ ಕಸ್ತೂರಿ ರಂಗಾಚಾರ್ಯ, ರಾಜ್ಯಪ್ರಶಸ್ತಿ ವಿಜೇತ ನಿವೃತ್ತ ಶಾಲಾ ಮುಖ್ಯೋಪಾಧ್ಯಾಯರಾದ ಎಚ್. ಹರಿಕೃಷ್ಣ ಹಂದೆ, ಯಕ್ಷದೇಗುಲದ ನಿರ್ದೇಶಕರಾದ ಕೆ. ಮೋಹನ್, ಬರಹಗಾರರಾದ ಮಹಾಬಲಮೂರ್ತಿ ಕೊಡ್ಲುಕೆರೆ, ಅಕ್ಸಿಸ್ ಕಮ್ಯುನಿಕೇಷನ್ ನಿರ್ದೇಶಕ ಹಾಗೂ ಯಕ್ಷಗಾನ ಕಲಾವಿದರಾದ ಸುಧೀಂದ್ರ ಹೊಳ್ಳ, ಬರಹಗಾರರು ಮತ್ತು ವಿಮರ್ಶಕರಾದ ರವಿ ಮಡೋಡಿ, ವೇದ ವಿದ್ವಾಂಸರಾದ ಡಾ. ಕೆ. ಪಿ. ನಿರಂಜನ್ ಭಟ್, ಪರಿಸರ ಸಂರಕ್ಷಣಾಧಿಕಾರಿ ಹಾಗೂ ಬಹುರಾಷ್ಟ್ರೀಯ ಬೀಜ ಉದ್ಯಮಿ ಸಂಸ್ಥೆಯ ಅಧಿಕಾರಿ ಶ್ರೀಮತಿ ಸುಭದ್ರ ಗುಪ್ತ, ಕನ್ನಡ ಕರಾವಳಿ ಕೂಟದ ಸತೀಶ್ ಅಗ್ದಲ ಹಾಗೂ ಯಕ್ಷ ಫೌಂಡೇಷನ್ ಇದರ ನಿರ್ದೇಶಕ ಹಾಲಾಡಿ ಶಶಿಕಾಂತ್ ಆಚಾರ್ಯರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಯಕ್ಷಫೌಂಡೇಷನ್ ಬೆಂಗಳೂರು ವತಿಯಿಂದ ಯಕ್ಷಗುರು ಕೋಟ ಸುದರ್ಶನ ಉರಾಳರಿಗೆ ಸನ್ಮಾನ
Previous Articleವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತನೇ ಉಪನ್ಯಾಸ