ಮಡಿಕೇರಿ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ 2026ರ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಹಾಗೂ ಸಾಹಿತ್ಯ – ಸಾಂಸ್ಕೃತಿಕ ವೈಭವ ದಿನಾಂಕ 28 ಫೆಬ್ರವರಿ 2026ರಂದು ಕುಟ್ಟ ಕೊಡವ ಸಮಾಜದಲ್ಲಿ ನಡೆಯಲಿದೆ.
ಸಮಾರಂಭದಲ್ಲಿ ಸಾಹಿತ್ಯ, ಸಾಂಸ್ಕೃತಿಕ, ಜಾನಪದ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಅಪಾರವಾದ, ಸೇವೆಗೈದಿರುವ 15 ಮಂದಿಗೆ ಗೌರವ ಪ್ರಶಸ್ತಿಯನ್ನಿತ್ತು ಗೌರವಿಸಲಾಗುವುದೆಂದು ಅಕಾಡೆಮಿ ತಿಳಿಸಿದೆ. ಸಮಾರಂಭದಲ್ಲಿ ಮಲ್ಲೇಂಗಡ ದಾದ ಬೆಳ್ಯಪ್ಪ (ಸಮಾಜ ಸೇವೆ ಕ್ಷೇತ್ರ), ಚೆಪ್ಪುಡಿರ ತಿಲಕ್ ಸುಬ್ಬಯ್ಯ (ಸಮಾಜ-ಸಂಸ್ಕೃತಿ ಕ್ಷೇತ್ರ), ತೀತಮಾಡ ಅರ್ಜುನ್ ದೇವಯ್ಯ (ವ್ಯಕ್ತಿತ್ವ-ಸಮಾಜ ಕ್ಷೇತ್ರ), ಉದಿಯಂಡ ರೋಷನ್ ಸೋಮಣ್ಣ (ಸಾಹಿತ್ಯ-ಸಮಾಜ ಕ್ಷೇತ್ರ), ಚೆನಿಯಪಂಡ ಮನು ಮಂದಣ್ಣ (ಸಾಹಿತ್ಯ-ಸಂಸ್ಕೃತಿ ಕ್ಷೇತ್ರ), ಚೊಟ್ಟೆಯಂಡ ಅಪ್ಪಾಜಿ (ಸಂಸ್ಕೃತಿ ಕ್ಷೇತ್ರ), ಕಣಿಯರ ನಾಣಯ್ಯ (ಜಾನಪದ ಕ್ಷೇತ್ರ), ನಡಿಕೇರಿಯಂಡ ವಿಕ್ರಂ ಅಪ್ಪಯ್ಯ (ಕಲೆ-ಸಂಸ್ಕೃತಿ ಕ್ಷೇತ್ರ), ಚಮ್ಮಣಮಡ ವಾಣಿ ರಾಘವೇಂದ್ರ (ಸಾಹಿತ್ಯ ಕ್ಷೇತ್ರ), ಕುಡಿಯರ ಕೆ. ಚಿಣ್ಣಪ್ಪ (ಜಾನಪದ ಕ್ಷೇತ್ರ), ಸುಳ್ಳಿಮಾಡ ಗೌರಿ ನಂಜಪ್ಪ (ಜಾನಪದ ಕ್ಷೇತ್ರ), ಚೋಕಂಡ ಸಂಜು ಸುಬ್ಬಯ್ಯ (ಸಮಾಜ ಸೇವೆ ಕ್ಷೇತ್ರ), ಐಮಂಡ ರೂಪೇಶ್ ನಾಣಯ್ಯ (ಕಲಾ ಸೇವಾ ಕ್ಷೇತ್ರ), ಶ್ರೀ ಕಾಳಿಕುಟ್ಟಡ ಬೋಜಣ್ಣ (ಸಂಸ್ಕೃತಿ ಕ್ಷೇತ್ರ), ಕೊರಕುಟ್ಟಿರ ಸರ ಚಂಗಪ್ಪ (ಸಮಾಜ ಸೇವೆ ಕ್ಷೇತ್ರ)ಗಳ ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನಿತ್ತು ಸನ್ಮಾನಿಸಲಾಗುತ್ತದೆ.
ಇದೇ ಸಂದರ್ಭ ‘ಕೊಡವ ಪುಸ್ತಕ ಪತ್ತಾಯ’ವನ್ನು ಕುಟ್ಟ ಕೊಡವ ಸಮಾಜದಲ್ಲಿ ತೆರೆಯಲಾಗುತ್ತದೆ. ಅಂದು ಬೆಳಗ್ಗೆ 10-00 ಗಂಟೆಗೆ ನಡೆಯುವ ಸಮಾರಂಭಕ್ಕೆ ಉಸ್ತುವಾರಿ ಸಚಿವರಾದ ಎನ್.ಎಸ್. ಬೋಸರಾಜು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣನವರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಕುಟ್ಟ ಕೊಡವ ಸಮಾಜದ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ಕುಟ್ಟ ಕೊಡವ ಸಮಾಜದ ಜಾಗ ದಾನಿಯವರಾದ ಮುಕ್ಕಾಟಿರ ರಾಜ ಮಂದಣ್ಣನವರು ಮೆರವಣಿಗೆಗೆ ಚಾಲನೆ ನೀಡಲಿದ್ದು, ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಂಡಿಜಮ್ಮನ ಎಂ. ಬಾಲಕೃಷ್ಣ, ಪೊನ್ನಿರ ಯು. ಗಗನ್, ನಾಯಂದಿರ ಆರ್. ಶಿವಾಜಿ ಮತ್ತು ಚೆಪ್ಪುಡಿರ ಎಸ್. ಉತ್ತಪ್ಪನವರು ಕಾರ್ಯಕ್ರಮದ ಸಂಚಾಲಕರಾಗಿ ಕಾರ್ಯ ನಿರ್ವಹಿಸಲಿರುವರು.
