ಮೈಸೂರು: ಮೈಸೂರಿನ ಮಂಡ್ಯ ರಮೇಶ್ ಇವರ ‘ನಟನ’ ರಂಗಶಾಲೆಯಲ್ಲಿ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆಯ ಮಕ್ಕಳ ‘ಹೂವಿನಕೋಲು’ ಯಕ್ಷಗಾನ ಕಲಾಪ್ರಕಾರದ ಕಾರ್ಯಕ್ರಮ ದಿನಾಂಕ 16 ಡಿಸೆಂಬರ್ 2025ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ‘ನಟನ’ದ ಪ್ರಾಂಶುಪಾಲ ಮೇಘಸಮೀರ “ಅಭಿಮಾನದಿಂದ ‘ನಟನ’ದ ಸುತ್ತ ಒಂದಷ್ಟು ಕಾಲ ಸುತ್ತಿ ಕರಾವಳಿಯ ಸಾಂಪ್ರದಾಯಿಕ ಸೊಗಡನ್ನು ನಟನದ ರಂಗಶಾಲೆಯಲ್ಲಿ ಪ್ರದರ್ಶಿಸಿ ತನ್ಮೂಲಕ ಯಶಸ್ವಿ ಕಲಾವೃಂದ ಹಾಗೂ ನಟನ ರಂಗಶಾಲೆಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವಂತೆ ಮಾಡಿದ್ದು ಸೊಗಸು. ಕಲಾ ಪ್ರಸ್ತುತಿಯಿಂದ ನಮ್ಮಲ್ಲಿಯ ಅನೇಕ ಶಿಷ್ಯರನ್ನು ಉತ್ತೇಜಿಸಿ ಗೆದ್ದಿದ್ದಾರೆ” ಎಂದು ಮೆಚ್ಚುಗೆ ಮಾತನ್ನಾಡಿದರು.
ಕಾರ್ಯಕ್ರಮದಲ್ಲಿ ರಂಗ ಶಿಕ್ಷಕಿ ದಿಶಾ ಮಂಡ್ಯ ರಮೇಶ್, ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಯಕ್ಷಗುರು ಲಂಬೋದರ ಹೆಗಡೆ ನಿಟ್ಟೂರು, ಕಾರ್ಯದರ್ಶಿ ವೆಂಕಟೇಶ ವೈದ್ಯ, ರಾಹುಲ್ ಕುಂದರ್, ಗೋಪಾಲ ಪೂಜಾರಿ ಹಾಗೂ ನಟನ ರಂಗಶಾಲೆಯ ಶಿಷ್ಯರು ಉಪಸ್ಥಿತರಿದ್ದರು.