27 ಮಾರ್ಚ್ 2023, ಹೊಸಕೋಟೆ: ಬೆ೦ಗಳೂರು ಗ್ರಾಮಾಂತರ ಜಿಲ್ಲೆಯ ಗಡಿ ತಾಲೂಕು ಹೊಸ ಕೋಟೆಯಲ್ಲಿ ಚಿತ್ರನಟಿ ಅನುತೇಜ ನೇತೃತ್ವದಲ್ಲಿ, ಬೆಂಗಳೂರು ಅನ್ನಪೂರ್ಣ ಟ್ರಸ್ಟ್ (ರಿ) ಇವರು ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವ ಅಂಗವಾಗಿ ಸಾಂಸ್ಕೃತಿಕ ಮೇಳ ಹಾಗೂ ಸಾಮಾಜಿಕ-ಕಲೆ-ಶಿಕ್ಷಣ–ಸಾಹಿತ್ಯ, ಯೋಧರು ಹಾಗೂ ಪೌರ ಕಾಮಿ೯ಕರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದ ಕಾರ್ಯಕ್ರಮವು ದಿನಾಂಕ 24-03-2023 ಶುಕ್ರವಾರದಂದು ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಕನಾ೯ಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಪ್ರಾಯೋಜಿತ ಕಾರ್ಯಕ್ರಮವನ್ನು ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯರು ಮಾಜಿ ಸಚಿವರು ಆದ ಮಾನ್ಯ ಶ್ರೀ ಬಿ.ಎನ್. ಬಚ್ಚೇಗೌಡರು ಉದ್ಧಾಟಿಸಿದರು. ಸರ್ಕಾರ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ನೀಡಿ ಗಡಿ ಭಾಗದ ಅಭಿವೃದ್ಧಿಗೆ ಸಹಕರಿಸಲು ಕರೆ ನೀಡಿದರು. ವೇದಿಕೆಯಲ್ಲಿ ಮಾಜಿ ಜಿ.ಪಂ.ಅಧ್ಯಕ್ಷರಾದ ಮುನಿಯಪ್ಪ, ನಗರ ಅ.ಪ್ರಾ. ಮಾಜಿ ಅಧ್ಯಕ್ಷ ವಿಜಯಕುಮಾರ, ವೀ.ಸ.ಸಂ. ಹೊಸ ಕೋಟ, ಜಿಲ್ಲಾ ಅಧ್ಯಕ್ಷ ಡಿ.ಎಸ್. ರಾಜಕುಮಾರ್ ಹಾಜರಿದ್ದರು.
ಈ ಸಂದರ್ಭದಲ್ಲಿ ಯೋಧರಾದ ಶ್ರೀ ನಾಗೇಶ್ ಕದಂ, ಸಾಹಿತಿಯಾದ ಶ್ರೀ ಜಗದೀಶ್ ಕಂಗನಾಳ್ ಹಾಗೂ ಕನ್ನಡ ಶಿಕ್ಷಕಿಯಾದ ಶ್ರೀಮತಿ ಭಾರತಿ (ಬಾಲನಾರಾಯಣಮ್ಮ) ಇವರನ್ನು ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಅನುತೇಜ ಮತ್ತು ತಂಡ ದವರಿಂದ ಭಾರತೀಯ ವಿಭಿನ್ನ ಶೈಲಿಯ ನೃತ್ಯ, ಜಾನಪದ ನೃತ್ಯ ತಂಡ ಹಾಗೂ ವೀರ ಗಾಸೆ ತಂಡ ದವರಿಂದ ನೃತ್ಯ ವೈವಿದ್ಯ ಹಾಗೂ ತಮಟೆ ವಾದನ ನಡೆಯಿತು.