ತೆಕ್ಕಟ್ಟೆ: ಹಲವಾರು ವರ್ಷಗಳ ಹಿಂದೆ ಕಲಾವಿದರು ಮಳೆಗಾಲದಲ್ಲಿ ತಮ್ಮ ಬದುಕಿಗಾಗಿ ಕಟ್ಟಿಕೊಂಡ ಕಾರ್ಯಕ್ರಮ ‘ಹೂವಿನಕೋಲು’ ನಶಿಸಿ ಹೋದ ಕಾಲಘಟ್ಟದಲ್ಲಿ ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಸಂಸ್ಥೆ ಒಂದಷ್ಟು ಮಕ್ಕಳನ್ನು ಒಗ್ಗೂಡಿಕೊಂಡು ಆಯ್ದ ಕೆಲ ಮನೆಗಳಲ್ಲಿ ಮತ್ತೆ ಹಳೆಯ ಪ್ರಕಾರವನ್ನು ನೆನಪಿಸುವ ಕಾರ್ಯವನ್ನು ಕೈಗೆತ್ತಿಕೊಂಡು ಯಶಸ್ಸು ಕಂಡಿದೆ. ಈ ವರ್ಷವೂ ಎರಡು ತಂಡವಾಗಿ ಮಾಡಿಕೊಂಡು ಕರಾವಳಿಯುದ್ದಕ್ಕೂ ತಿರುಗಾಟ ಮಾಡುವುದಕ್ಕೆ ಸನ್ನದ್ಧವಾಗಿದೆ. ಕಾರ್ಯದರ್ಶಿ ವೆಂಕಟೇಶ ವೈದ್ಯ ಹಾಗೂ ಸದಸ್ಯ ಗಣಪತಿ ಭಟ್ ಯಲ್ಲಾಪುರ ಇವರೀರ್ವರ ತಂಡ ಅಲ್ಲಲ್ಲಿ ಕೆಲ ಮನೆಗಳಲ್ಲಿ ಅಭಿಯಾನವನ್ನು ಕೈಗೊಳ್ಳಲಿದೆ. ಸೆಪ್ಟೆಂಬರ್ 22 ರಂದು ಬೆಳಿಗ್ಗೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಕಾರ್ಯಕ್ರಮ ಉದ್ಘಾಟಿಸಿಕೊಂಡು ನವೆಂಬರ್ 2ರ ತನಕ ಕುಂದಾಪುರ, ಬ್ರಹ್ಮಾವರ, ಉಡುಪಿ, ಮಂಗಳೂರಿನಾದ್ಯಂತ ಹಲವಾರು ಕಡೆಗಳಲ್ಲಿ ಹೂವಿನಕೋಲು ಕಾರ್ಯಕ್ರಮ ನೆರವೇರಿಸಿಕೊಳ್ಳಲಿದೆ. ಪ್ರಾಚಾರ್ಯ ದೇವದಾಸ್ ರಾವ್, ರಾಹುಲ್ ಕುಂದರ್ ಕೋಡಿ, ಪೂಜಾ ಆಚಾರ್, ಪಂಚಮಿ ವೈದ್ಯ, ಹರ್ಷಿತಾ ಅಮೀನ್, ಪವನ್ ಆಚಾರ್, ಕಿಶನ್ ಪೂಜಾರಿ, ಪರಿಣಿತ ವೈದ್ಯ, ಆರಭಿ ಹಗಡೆ, ಪ್ರಣಮ್ಯ ಭಟ್, ಪೂರ್ವಿ ದೇವಾಡಿಗ, ಮನೋಮಯ್ ಕಾರಂತ್ ಇನ್ನೂ ಹಲವಾರು ಕಲಾವಿದರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ತಿಳಿಸಿದ್ದಾರೆ.