ಮೈಸೂರು : ಅಂತರಂಗ ಅಭಿನಯಿಸುವ ಕೈಲಾಸಂರ ‘ಹುತ್ತದಲ್ಲಿ ಹುತ್ತ’ ಅಪೂರ್ವ ಹಾಸ್ಯ ನಾಟಕ ಪ್ರದರ್ಶನವನ್ನು ದಿನಾಂಕ 22 ಫೆಬ್ರವರಿ 2026ರಂದು ಸಂಜೆ ಗಂಟೆ 7-15ಕ್ಕೆ ಮೈಸೂರಿನ ಕಲಾಮಂದಿರ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
64ನೇ ಪ್ರದರ್ಶನದ ಈ ನಾಟಕವನ್ನು ಮೂಲ ನಿರ್ದೇಶನ ಡಾ. ಬಿ.ವಿ. ರಾಜಾರಾಂ ಹಾಗೂ ಪರಿಷ್ಕೃತ ನಿರ್ದೇಶನ ಅರ್ಚನಾ ಶ್ಯಾಮ್ ಇವರು ಮಾಡಿರುತ್ತಾರೆ. ಅಂಕಲ್ ಶ್ಯಾಂ ಇವರು ನಿರ್ವಹಣೆ ಮಾಡಿರುವ ಈ ನಾಟಕ ನಿರಂತರ ಫೌಂಡೇಷನ್ ಮೈಸೂರು ಇವರ ಸಹಕಾರದಲ್ಲಿ ಪ್ರದರ್ಶನಗೊಳ್ಳುತ್ತಿದೆ.


ಅಂತರಂಗ ತಂಡ 46 ವರ್ಷಗಳಿಂದ ರಂಗ ಕ್ರಿಯಯನ್ನು ನಡೆಸಿಕೊಂಡು ಬರುತ್ತಿದ್ದು, ಕೈಲಾಸಂರ ‘ಹುತ್ತದಲ್ಲಿ ಹುತ್ತ’ ನಾಟಕವನ್ನು ಈಗಾಗಲೇ ಯಶಸ್ವಿಯಾಗಿ ಪ್ರದರ್ಶಿಸಿದೆ. ಕೈಲಾಸಂ ಒಬ್ಬ ಅಪ್ರತಿಮ ನಾಟಕಕಾರ. ಇಂದಿಗೂ ಅವರ ನಾಟಕಗಳು ಪ್ರಸ್ತುತವಾಗಿದ್ದು, ರಂಗಭೂಮಿಯಲ್ಲಿ ಚಿರಸ್ಥಾಯಿಯಾಗಿದೆ.
