ಮಂಗಳೂರು : ಮಂಗಳೂರಿನ ಶ್ರೀ ಶ್ರೀ ಕುರು ಅಂಬಾ ರಾಜರಾಜೇಶ್ವರಿ ಸುಬ್ರಮಣ್ಯ ದೇಗುಲದಲ್ಲಿ ಲಲಿತಾ ಪಂಚಮಿ ಪ್ರಯುಕ್ತ ಯಕ್ಷಗಾನ ಬಯಲಾಟ ‘ಇಳಾರಜತ’ವು ದಿನಾಂಕ 20-10-2023ರಂದು ಉಮೇಶ ಕರ್ಕೇರ ಮತ್ತು ಬಳಗದವರಿಂದ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕುರು ಅಂಬಾ ದೇವಳದ ಆಡಳಿತ ಮೊಕ್ತೇಸರರಾದ ಶ್ರೀ ಪಿ. ಮಹಾ ಬಲ ಚೌಟ “ಯುಕ್ಷಗಾನವು ಇಂದು ವಿಶ್ವವ್ಯಾಪಿಯಾಗಿದೆ. ಪಂಡಿತ-ಪಾಮರರೂ ಇಂದು ಏಕ ಪ್ರಕಾರವಾಗಿ ಈ ರಂಗದಲ್ಲಿ ತಮ್ಮ ಚಾಕಚಾಕ್ಯತೆಯನ್ನು ತೋರಿಸುತ್ತಿದ್ದಾರೆ. ಶ್ರೀಕುರು ಅಂಬಾ ದೇವಳದ ಸಹಿತ ಅನೇಕ ಪುಣ್ಯಕ್ಷೇತ್ರಗಳಲ್ಲಿ ಈ ಸೇವೆ ನಿರಂತರವಾಗಿ ನಡೆಯುತ್ತಿದೆ. ಇಂದು ಕೂಡಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯದಿಂದ ಉಮೇಶ ಕರ್ಕೇರ ಒಂದು ಉತ್ತಮ ಕಾರ್ಯಕ್ರಮ ನೀಡುತ್ತಿರುವುದು ಶ್ಲಾಘನೀಯ” ಎ೦ದು ಹೇಳಿದರು. ದೇವಳದ ಟ್ರಸ್ಟಿಗಳಾದ ಶ್ರೀ ಪುಷ್ಪರಾಜ್ ಶೆಟ್ಟಿ, ಜಾಹ್ನವಿ ರಮೇಶ್ ಶೆಟ್ಟಿ, ನಿರೂಪಕ ರಾಕೇಶ್ ಶೆಟ್ಟಿ, ಆಧ್ಯಾಪಿಕೆ ಶ್ರೀಮತಿ ಕೃಪಾ ಯನ್. ಖಾರ್ವಿ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಉಮೇಶ ಕರ್ಕೇರ ತಂಡದ ಸದಸ್ಯ ಚಿಂತನ್ ಆರ್. ಕೆ. ಯವರನ್ನು ಅವರ ಯಕ್ಷಗಾನೀಯ ಸೇವೆಗಾಗಿ ಗೌರವಿಸಲಾಯಿತು. ಸೇವಾ ಸಮಿತಿಯ ನಿತೇಶ್ ಕಾರ್ಯಕ್ರಮ ನಿರ್ವಹಿಸಿದರು.