ಮಂಗಳೂರು : ಅರೆಹೊಳೆ ಪ್ರತಿಷ್ಠಾನ ಹಾಗೂ ಕಲಾಭಿ (ರಿ.) ಸಹಯೋಗದಲ್ಲಿ ಮಂಗಳೂರಿನ ಬೋಂದೆಲ್ – ಮೂಡುಶೆಡ್ಡೆ ರಸ್ತೆ ಸಮೀಪದಲ್ಲಿ ನಿರ್ಮಾಣಗೊಂಡ ‘ಕಲಾಗ್ರಾಮ’ದ ಲೋಕಾರ್ಪಣೆ, ರಂಗಭೂಮಿ ದಿನಾಚರಣೆ ಹಾಗೂ ಅರೆಹೊಳೆ ರಂಗಭೂಮಿ ಪ್ರಶಸ್ತಿ ಪ್ರದಾನ, ಅರೆಹೊಳೆ ನಾಟಕೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 27 ಮಾರ್ಚ್ 2025ರ ಗುರುವಾರದಂದು ನಡೆಯಿತು.
ಕಲಾಗ್ರಾಮ ಉದ್ಘಾಟಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಎಂ. ಆಳ್ವ ಮಾತನಾಡಿ “ಕಲಾಕ್ಷೇತ್ರದಲ್ಲಿ ಇರುವವರು ಜೀವನ ಸಾರ್ಥಕತೆಯನ್ನು ಪಡೆದುಕೊಳ್ಳುತ್ತಾರೆ. ಕಲಾಗ್ರಾಮ ಬೆಳೆಯಲಿ, ರಂಗಭೂಮಿ ಬೆಳವಣಿಗೆಗೆ ಕೊಡುಗೆ ನೀಡುವಂತಾಗಲಿ” ಎಂದರು.
ಅರಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಿದರು. ರಂಗಕರ್ಮಿ ಆಸಿಫ್ ಕ್ಷತ್ರಿಯ ಬೆಂಗಳೂರು ಇವರಿಗೆ ‘ಅರೆಹೊಳೆ ರಂಗಭೂಮಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ತಾರನಾಥ್ ಗಟ್ಟಿ ಕಾಪಿಕಾಡ್, ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ. ರಾಜೇಶ್, ನಾಟಕಕಾರ ಫಾ. ಆಲ್ವಿನ್ ಸೆರಾವೋ, ನೃತ್ಯಗುರು ಶಾರದಾ ಮಣಿಶೇಖರ್, ‘ಕಲಾಭಿ’ ಮಂಗಳೂರು ಇದರ ಅಧ್ಯಕ್ಷರಾದ ಸುರೇಶ್ ವರ್ಕಾಡಿ, ಸ್ವಸ್ತಿಕ ಬಿಸ್ನೆಸ್ ಸ್ಕೂಲ್ ಇದರ ಡಾ.ರಾಘವೇಂದ್ರ ಹೊಳ್ಳ, ಅರೆಹೊಳೆ ಪ್ರತಿಷ್ಠಾನದ ಅರೆಹೊಳೆ ಸದಾಶಿವ ರಾವ್ ಉಪಸ್ಥಿತರಿದ್ದರು. ಆರ್. ಜೆ. ಅಭಿಷೇಕ್ ನಿರೂಪಿಸಿದರು.
ಸಭಾಕಾರ್ಯಕ್ರಮದ ಬಳಿಕ ‘ಕಲಾಭಿ ಥಿಯೇಟರ್’ (ರಿ.) ಮಂಗಳೂರು ಪ್ರಸ್ತುತಪಡಿಸಿದ, ಶ್ರವಣ್ ಹೆಗ್ಗೋಡು ಇವರ ರಂಗರೂಪ ಹಾಗೂ ನಿರ್ದೇಶನದ ‘ಎ ಫ್ರೆಂಡ್ ಬಿಯಾಂಡ್ ದ ಫೆನ್ಸ್‘ ನಾಟಕ ಪ್ರದರ್ಶನಗೊಂಡಿತು.