ತೆಕ್ಕಟ್ಟೆ: ಧಮನಿ (ರಿ.) ತೆಕ್ಕಟ್ಟೆ ನೇತೃತ್ವದಲ್ಲಿ ಮಕ್ಕಳಿಗಾಗಿ ಹದಿನೈದು ದಿನಗಳ ವೃತ್ತಿಪರ ರಂಗ ತರಬೇತಿ ಕಾರ್ಯಾಗಾರ “ಚಿಗುರು” ಇದರ ಉದ್ಘಾಟನಾ ಸಮಾರಂಭವು ದಿನಾಂಕ 17 ಮೇ 2025ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಖ್ಯಾತ ರಂಗ ನಿರ್ದೇಶಕ ಪ್ರಶಾಂತ್ ಶೆಟ್ಟಿ ಕೋಟ ಮಾತನಾಡಿ “ರಂಗಾಭ್ಯಾಸದ ಮೂಲಕ ಮಾನವೀಯತೆ ಗುಣಗಳನ್ನು ಕಲಿತು ಸಮಾಜಕ್ಕೆ ಮಾದರಿಯಾಗಿರುವುದು ಒಳ್ಳೆಯ ಸಂಸ್ಕಾರ. ರಂಗಭೂಮಿಯಲ್ಲಿ ಬದ್ಧತೆ, ಶಿಸ್ತು, ಅತೀ ಅಗತ್ಯ. ಪ್ರಸಿದ್ಧಿಯ ಕಡೆಗೆ ಒಲವು ಒಳಿತಲ್ಲ. ಪ್ರಸಿದ್ಧಿಯಿಂದ ಬೆಳವಣಿಗೆ ಕುಂಠಿತವಾಗುತ್ತದೆ. ನಿರಂತರ ರಂಗಕಲೆಯಲ್ಲಿ ತೊಡಗಿಕೊಂಡರೆ ತಾನೇ ತಾನಾಗಿ ಪ್ರಸಿದ್ಧಿ ಬಂದೇ ಬರುತ್ತದೆ. ಪ್ರಸಿದ್ಧಿಯ ಬೆನ್ನು ಹಿಡಿದು ಹೋಗದಿರಿ” ಎಂದು ಹೆಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ‘ಕೈಲಾಸ’ ಕಲಾಕ್ಷೇತ್ರದ ಅಧ್ಯಕ್ಷರಾದ ಹೆರಿಯ ಮಾಸ್ಟರ್ ಮಾತನಾಡಿ “ರಂಗ ಭೂಮಿಯ ಮೂಲಕ ಹೊಸ ಪ್ರಪಂಚಕ್ಕೆ ಹೊಸತನ, ಹೊಸ ಮೌಡ್ಯಗಳಿಂದ ಹೊಸ ಭಾಷ್ಯ ಬರೆದು ನಾವೀನ್ಯತೆಯನ್ನು ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ” ಎಂದರು. ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ ಮಾತನಾಡಿ “ಮಕ್ಕಳ ರಂಗಭೂಮಿ ಅದ್ಭುತ ಪರಿಕಲ್ಪನೆ. ಈ ನಿಟ್ಟಿನಲ್ಲಿ ಧಮನಿ ಸಂಸ್ಥೆ ಉತ್ತಮ ನಿರ್ಧಾರವನ್ನು ಕೈಗೊಂಡಿದೆ” ಎಂದರು.
ಶ್ರೀಶ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಹರ್ಷಿತಾ ಅಮೀನ್ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಹಾಗೂ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
Subscribe to Updates
Get the latest creative news from FooBar about art, design and business.
Previous Articleಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾವಿದರ ಸಮಾವೇಶ | ಮೇ 31
Next Article ಉದ್ಘಾಟನೆಗೊಂಡ ಪುತ್ರಕಾಮೇಷ್ಠಿ ಯಕ್ಷಗಾನ ತಾಳಮದ್ದಳೆ