ಉಡುಪಿ : ಕೊಡವೂರು ಶ್ರೀ ದೇವಳದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಆರಾಧನೆ- ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ದಿನಾಂಕ 10 ಆಗಸ್ಟ್ 2025ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾದ ಜ್ಯೋತಿ ಕೆ. ಹೆಬ್ಬಾರ್ ಮಾತನಾಡಿ “ಸಾಂಸ್ಕೃತಿಕವಾಗಿ ಶ್ರೀಮಂತಿಕೆ ಮಾರ್ದನಿಸುತ್ತಿರುವ ಊರು ಕೊಡವೂರು. ಕಲೆ, ಸಾಹಿತ್ಯ, ಸಂಸ್ಕೃತಿ, ಆಧ್ಯಾತ್ಮದ ಅಸ್ಮಿತೆ ಯಿಂದ ಬೆಳಗುತ್ತಿರುವ ಶ್ರೀ ಶಂಕರ ನಾರಾಯಣನ ಈ ದಿವ್ಯ ಸನ್ನಿಧಿಯಲ್ಲಿ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆಯ ಈ ಪರ್ವ ಕಾಲದಲ್ಲಿ ಕಲಾವಿದರಿಗೆ ಹಾಗೂ ಭಕ್ತಾದಿಗಳಿಗೆ ಶುಭವಾಗಲಿ” ಎಂದು ಹಾರೈಸಿದರು.
ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಶ್ರೀ ದೇವಳದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕ ಸೀತಾರಾಮ ಆಚಾರ್ಯ, ಭಕ್ತವೃಂದದ ಅಧ್ಯಕ್ಷರಾದ ತೋಟದಮನೆ ದಿವಾಕರ ಶೆಟ್ಟಿ, ನಗರಸಭಾ ಸದಸ್ಯ ವಿಜಯ ಕೊಡವೂರು, ಉದ್ಯಮಿ ಸಾಧು ಸಾಲ್ಯಾನ್, ವ್ಯವಸ್ಥಾಪನ ಸಮಿತಿ ಸದಸ್ಯ ಭಾಸ್ಕರ್ ಪಾಲನ್, ಎ. ರಾಜ ಸೇರಿಗಾರ್ ಉಪಸ್ಥಿತರಿದ್ದರು.
ಶಂಕರನಾರಾಯಣ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾರ್ದನ್ ಕೊಡವೂರು ಸ್ವಾಗತಿಸಿ, ಕಾವ್ಯ ಸೀತಾರಾಮ್ ಪ್ರಾರ್ಥಿಸಿ, ಪೂರ್ಣಿಮಾ ಜನಾರ್ದನ್ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Previous Articleಯುವ ನಾಟಕಕಾರ ನಾರಾಯಣ ಕೊಯಿಲ ನಿಧನ
Next Article ಕಾಸರಗೋಡಿನಲ್ಲಿ “ಗುರುದಕ್ಷಿಣೆ” ಯಕ್ಷಗಾನ ತಾಳಮದ್ದಳೆ