ಬೆಳ್ತಂಗಡಿ: ಬೆಳ್ತಂಗಡಿಯ ದುರ್ಗಾಪರಮೇಶ್ವರಿ ಯಕ್ಷಗಾನ ಅಧ್ಯಯನ ಕೇಂದ್ರದ ಉದ್ಘಾಟನಾ ಸಮಾರಂಭವು ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದೊಂದಿಗೆ ದಿನಾಂಕ 17 ನವೆಂಬರ್ 2024ರ ಭಾನುವಾರದಂದು ಮುಂಡಾಜೆ ಶಾರದಾ ನಗರದಲ್ಲಿ ನಡೆಯಿತು.
ಯಕ್ಷಗಾನ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿದ ರಬ್ಬರ್ ಸೊಸೈಟಿಯ ಉಪಾಧ್ಯಕ್ಷರಾದ ಮಚ್ಚಿಮಲೆ ಅನಂತ ಭಟ್ ಮಾತನಾಡಿ “ಪುರಾಣವನ್ನು ಮುಂದಿನ ಪೀಳಿಗೆಗೆ ತಿಳಿಸುವ ಸುಲಭ ಕಲಾ ಮಾರ್ಗವೇ ಯಕ್ಷಗಾನ. ಈ ಕಲೆ ಉಳಿದು ಬೆಳೆದರೆ ಸಾಹಿತ್ಯ ಪರಂಪರೆಯೊಂದು ಜೀವಂತವಾಗಿರಲು ಸಾಧ್ಯ.” ಎಂದರು.
ಅಧ್ಯಯನ ಕೇಂದ್ರದ ಮುಖ್ಯಸ್ಥ, ರವಿಕುಮಾರ್ ಮುಂಡಾಜೆ ಮಾತನಾಡಿ “ಯಕ್ಷಗಾನದಲ್ಲಿ ನಾವು ಮಾತ್ರ ಕಾಣಿಸಿಕೊಳ್ಳುವುದಲ್ಲ, ನಮ್ಮ ಊರು ಕೂಡ ಕಾಣಿಸಿಕೊಳ್ಳಬೇಕು. ನಮ್ಮಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಈ ಯಕ್ಷಗಾನ ಅಧ್ಯಯನ ಕೇಂದ್ರ ಪ್ರಾರಂಭ ಮಾಡಲಾಗಿದೆ.” ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಣೇಶ್ ಬಂಗೇರ ಕೂಳೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ದಯಾನಂದ ಪಿ. ಬೆಳಾಲು, ರಾಘವ ಎಚ್. ಗೇರುಕಟ್ಟೆ, ಯಕ್ಷಗಾನ ಗುರು ದಿವಾಣ ಶಿವಶಂಕರ್ ಭಟ್, ಕಟೀಲು ಮೇಳದ ಯಕ್ಷಗಾನ ಕಲಾವಿದ ರಾಮಣ್ಣ ಭಂಡಾರಿ ಚಾರ್ಮಾಡಿ, ಕೀರ್ತನಾ ಕಲಾತಂಡದ ಸಂಚಾಲಕ ಸದಾನಂದ ಬಿ., ಚೆನ್ನಕೇಶವ ನಾಯ್ಕ ಅರಸಮಜಲು, ಮಂಜುಶ್ರೀ ಭಜನಾ ಮಂಡಳಿ ಕಾರ್ಯದರ್ಶಿ ಉಮೇಶ ಆಚಾರ್ಯ, ಜನಪದ ಕಲಾವಿದೆ ರಂಜಿನಿ ಆರ್. ಉಪಸ್ಥಿತರಿದ್ದರು. ಜಯರಾಮ್ ಕೆ. ಮುಂಡಾಜೆ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
ಮುಂಡಾಜೆಯಲ್ಲಿ ಉದ್ಘಾಟನೆಗೊಂಡ ದುರ್ಗಾಪರಮೇಶ್ವರಿ ಯಕ್ಷಗಾನ ಅಧ್ಯಯನ ಕೇಂದ್ರ
Previous Articleಇರಾ ಸಭಾಭವನದಲ್ಲಿ ‘ಪುವೆಂಪು ನೆನಪು -2024’ | ನವೆಂಬರ್ 20