ಕೋಟ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ನೇತೃತ್ವದಲ್ಲಿ ‘ಸಿನ್ಸ್ 1999 ಶ್ವೇತಯಾನ-64’ ಕಾಯಕ್ರಮದಡಿ ನವರಾತ್ರಿಯ ಸಂದರ್ಭದ ಹೂವಿನಕೋಲು ಅಭಿಯಾನಕ್ಕೆ ಮರು ಚಾಲನೆ ಕಾರ್ಯಕ್ರಮವು ದಿನಾಂಕ 04 ಅಕ್ಟೋಬರ್ 2024 ರಂದು ನಡೆಯಿತು.
ಕಾರ್ಯಕ್ರಮಕ್ಕೆ ಮರು ಚಾಲನೆ ನೀಡಿದ ಗೀತಾನಂದ ಫೌಂಡೇಶನ್ ಇದರ ಪ್ರವರ್ತಕರಾದ ಆನಂದ ಸಿ. ಕುಂದರ್ ಮಾತನಾಡಿ “ನವರಾತ್ರಿಯಲ್ಲಿ ಮನೆಯಂಗಳಕ್ಕೆ ಹೂವಿನಕೋಲು ಹಿಡಿದು ಬರುವ ಮಕ್ಕಳನ್ನು ಗೌರವಿಸುವುದು ಸಂಸ್ಕೃತಿ. ಮನೆಗಳಲ್ಲಿ ಕಾರ್ಯಕ್ರಮ ಮಾಡಿಸುವುದು ಸಂಪ್ರದಾಯ. ಸಂಸ್ಕೃತಿ, ಸಂಪ್ರದಾಯಗಳು ನಾಶವಾಗುತ್ತಿರುವ ಈ ಹೊತ್ತಿನಲ್ಲಿ ಮನೆ ಮನೆಗಳಿಗೆ ತೆರಳಿ ಹೂವಿನಕೋಲು ಪರಿಚಯಿಸುವ ಕಾರ್ಯವನ್ನು ಮಾಡುತ್ತಿರುವ ಸಂಸ್ಥೆಯನ್ನು ಸಮಾಜ ಗೌರವಿಸಬೇಕು. ಯಶಸ್ವೀ ಕಲಾವೃಂದ ಕೊಮೆ ಹಲವಾರು ವರ್ಷಗಳಿಂದ ಈ ಕಾರ್ಯವನ್ನು ಕೈಗೆತ್ತಿಕೊಂಡು ನಡೆಸುವ ಸಾಹಸದಲ್ಲಿ ಪರಿಣತರು. ಇನ್ನಷ್ಟು ಈ ಸಂಸ್ಕೃತಿಯನ್ನು ಬೆಳೆಸುವ ಹಾಗೂ ಬೆಳಗುವ ಶಕ್ತಿಯನ್ನು ಮನೆಗಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಇರುವ ಮಂದಿ ಅವಕಾಶ ಕೊಡುವುದರ ಮೂಲಕ ಹೆಚ್ಚಿಸಬೇಕು.” ಎಂದರು.
ಉದ್ಯಮಿ ಪ್ರಶಾಂತ್ ಕುಂದರ್, ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಹಂಗಾರಕಟ್ಟೆ ಕೇಂದ್ರದ ಗುರುಗಳು, ಕಲಾವಿದರು ಹಾಗೂ ಯಶಸ್ವೀ ಕಲಾವೃಂದದ ಕಲಾವಿದರು ಉಪಸ್ಥಿತರಿದ್ದರು. ಬಳಿಕ ಗೋಪಾಡಿ, ಕುಂಭಾಶಿ, ಕೋಟ, ಹಂದಟ್ಟು ಹೀಗೆ ನಾಲ್ಕು ತಂಡಗಳಲ್ಲಿ ಕಲಾವಿದರು ಬೇರೆ ಬೇರೆ ಮನೆಗಳಲ್ಲಿ ಹೂವಿನಕೋಲು ಕಾರ್ಯಕ್ರಮ ನೀಡುವುದಕ್ಕೆ ತೆರಳಿದರು.
Subscribe to Updates
Get the latest creative news from FooBar about art, design and business.
Previous Articleಬಹುಭಾಷಾ ಮತ್ತು ತುಳು ಕವಿಗೋಷ್ಠಿಯಲ್ಲಿ ಕಾವ್ಯಾಮೃತ ಮಥನ