ಮಂಗಳೂರು: ಕಲೆ, ಕಲಾವಿದ & ಕಲಿಕೆ ಎನ್ನುವ ಉದ್ದೇಶದಿಂದ ಮುನ್ನಡೆಯುತ್ತಿರುವ ಮಂಗಳೂರಿನ ಪ್ರತಿಷ್ಠಿತ ರಂಗ ಸಂಸ್ಥೆ ಕಲಾಭಿ ಮಂಗಳೂರು ಇದೀಗ ಮತ್ತೊಂದು ಮೈಲಿಗಲ್ಲಿನತ್ತ ಪಯಣ ಬೆಳೆಸಿದೆ.
ಆಸಕ್ತ ಯಕ್ಷಗಾನ ಪ್ರಿಯರಿಗೆ ಯಕ್ಷ ನಾಟ್ಯ ಕಲಿಸುವ ಉದ್ದೇಶದಿಂದ ಕಲಾಭಿ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರನ್ನು ಆರಂಭಿಸಿಲಾಗಿದೆ. ಕಲಾಭಿ ಸಂಸ್ಥೆಯ ಅಧ್ಯಕ್ಷರಾದ ಸುರೇಶ್ ವರ್ಕಾಡಿ ಮತ್ತು ಕೇಂದ್ರದ ಗುರುಗಳಾದ ಶ್ರೀ ರಾಕೇಶ್ ರೈ ಅಡ್ಕ ಇವರ ನೇತೃತ್ವದಲ್ಲಿ ದಿನಾಂಕ 06 ಜೂನ್ 2025ರಂದು ಉದ್ಘಾಟನೆ ನಡೆಯಿತು. ಕಲಾಭಿ ತಂಡದ ಕಲಾವಿದರು ಕಲಿಕೆಯನ್ನು ಆರಂಭಿಸಿದ್ದಾರೆ.
ಆಸಕ್ತರು Kalabhi.org ಇನ್ಸ್ಟಾಗ್ರಾಮ್ ಚಾನಲ್ ಮೂಲಕ ಅಥವಾ +918431631998 ಈ ದೂರವಾಣಿಯನ್ನು ಸಂಪರ್ಕಿಸಬಹುದು.

