ಕಾಸರಗೋಡು: ಕಾಸರಗೋಡು ಜಿಲ್ಲೆಯ ರಾಮದಾಸ ನಗರದಲ್ಲಿರುವ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ (ರಿ.) ವತಿಯಿಂದ ಕೇಂದ್ರದ 25ನೇ ವರ್ಷದ ಅಂಗವಾಗಿ ಆಯೋಜಿಸಿದ ಸರಣಿ ಕಾರ್ಯಕ್ರಮ “ರಜತ ರಂಗ” ಇದರ ಉದ್ಘಾಟನಾ ಸಮಾರಂಭವು ದಿನಾಂಕ 20 ಅಕ್ಟೋಬರ್ 2025ರ ಸೋಮವಾರದಂದು ಎಡನೀರು ಮಠಾಧೀಶರಾದ ಶ್ರೀಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳು ಹಾಗೂ ಕೊಂಡೆವೂರು ಮಠಾಧೀಶರಾದ ಶ್ರೀ ಶ್ರೀ ಯೋಗಾನಂದ ಸರಸ್ವತೀ ಶ್ರೀಗಳ ಆಶೀರ್ವಾದದೊಂದಿಗೆ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಿತು.
ಕುತ್ಯಾಳ ಶ್ರೀ ಕ್ಷೇತ್ರದ ಮೊಕ್ತೇಸರರಾದ ಕೆ. ಜಿ. ಶ್ಯಾನುಭೋಗ್ ಇವರು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಸರಕಾರಿ ಜನರಲ್ ಆಸ್ಪತ್ರೆ, ಕಾಸರಗೋಡು, ಇಲ್ಲಿನ ವೈದ್ಯರಾದ ಡಾ. ಜನಾರ್ದನ ನಾಯ್ಕ ಸಿ.ಎಚ್. ದೀಪ ಬೆಳಗಿಸಿ ಉದ್ಘಾಟಿಸಿದರು. ರಜತ ಮಹೋತ್ಸವ ಸಮಿತಿ ಅಧ್ಯಕ್ಷರಾದ ಡಾ. ಹರಿಕಿರಣ್ ಬಂಗೇರ, ಪ್ರಧಾನ ಕಾರ್ಯದರ್ಶಿ ಹರಿನಾರಾಯಣ ಮಯ್ಯ ಹಾಗೂ ತರಬೇತಿ ಕೇಂದ್ರದ ಅಧ್ಯಕ್ಷರಾದ ಚಂದ್ರ ಮೋಹನ್ ಕೂಡ್ಲು, ಕೆ. ಕೆ. ಶ್ಯಾನುಭಾಗ್ ಮತ್ತು ಬಲಿಪ ಶಿವಶಂಕರ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಇಬ್ಬರು ಕೀರ್ತಿಶೇಷ ಕಲಾವಿದರಾದ ಕೂಡ್ಲು ಸುಬ್ರಾಯ ಶ್ಯಾನುಭೋಗ್ ಮತ್ತು ಹಿರಿಯ ಬಲಿಪ ನಾರಾಯಣ ಭಾಗವತರ ಸಂಸ್ಮರಣೆ ನಡೆಯಿತು. ಸಂಸ್ಮರಣಾ ಭಾಷಣವನ್ನು ರಾಜೇಂದ್ರ ಬಜಕೂಡ್ಲು ಮತ್ತು ಪತ್ರಕರ್ತ ವಿ.ಜಿ. ಕಾಸರಗೋಡು ನಿರ್ವಹಿಸಿದರು.
ಶಮಿತಾ ಶ್ಯಾನುಭೋಗ್ ಪ್ರಾರ್ಥನೆ ಹಾಡಿ, ಸತ್ಯನಾರಾಯಣ ತಂತ್ರಿ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿ, ಗುರುರಾಜ ಹೊಳ್ಳ ಬಾಯಾರು ನಿರೂಪಿಸಿ, ಸವಿತಾ ಟೀಚರ್ ವಂದಿಸಿದರು.
ಸಭಾಕರ್ಯಕ್ರಮದ ಬಳಿಕ ಸರಣಿ ಕಾರ್ಯಕ್ರಮದ ಅಂಗವಾಗಿ ಕವಿ ಹೊಸತೋಟ ಮಂಜುನಾಥ ಭಾಗವತ ವಿರಚಿತ ಯಕ್ಷಗಾನ ತಾಳಮದ್ದಳೆ “ಜ್ವಾಲಾ ಪ್ರತಾಪ” ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಬಲಿಪ ಶಿವಶಂಕರ ಭಟ್, ಚೆಂಡೆ-ಮದ್ದಳೆಯಲ್ಲಿ ಚಂದ್ರಶೇಖರ ಭಟ್ ಕೊಂಕಣಾಜೆ ಹಾಗೂ ಲಕ್ಷ್ಮೀಶ ಬೇಂಗೋಡಿ. ಚಕ್ರತಾಳದಲ್ಲಿ ಅರ್ಪಿತ್ ಶೆಟ್ಟಿ ಕೂಡ್ಲು ಸಹಕರಿಸಿದರು.
ಮುಮ್ಮೇಳದಲ್ಲಿ ಜಬ್ಬಾರ್ ಸಮೋ ಸಂಪಾಜೆ , ಗೋಪಾಲಕೃಷ್ಣ ನಾಯಕ್ ಸೂರಂಬೈಲು, ವೇಣುಗೋಪಾಲ ಶೇಣಿ, ಹರಿನಾರಾಯಣ ಮಯ್ಯ, ಗುರುರಾಜ ಹೊಳ್ಳ ಬಾಯಾರು, ಅಚ್ಯುತ ಬಲ್ಯಾಯ, ಸುರೇಶ ಮಣಿಯಾಣಿ ಭಾಗವಹಿಸಿದರು. ಅಪರಾಹ್ನ ಘಂಟೆ 4.00 ರಿಂದ ತರಬೇತಿ ಕೇಂದ್ರದ ಸದಸ್ಯರಿಂದ ಕವಿ ಹಿರಿಯ ಬಲಿಪ ನಾರಾಯಣ ಭಾಗವತ ವಿರಚಿತ “ನರಕಾಸುರ ಮೋಕ್ಷ” ಪ್ರಸಂಗದ ಯಕ್ಷಗಾನ ಬಯಲಾಟ ಜರುಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ತಲ್ಪಣಾಜೆ ವೆಂಕಟ್ರಮಣ ಭಟ್ ಹಾಗೂ ರಾಂಪ್ರಸಾದ್ ಮಯ್ಯ ಕೂಡ್ಲು, ಚೆಂಡೆ-ಮದ್ದಳೆಯಲ್ಲಿ ಪೃಥ್ವಿ ಚಂದ್ರ ಪೇರುವೋಡಿ, ಲಕ್ಷ್ಮೀಶ ಬೆಂಗ್ರೋಡಿ ಚಕ್ರತಾಳದಲ್ಲಿ ಅರ್ಪಿತ್ ಸಹಕರಿಸಿದರು.
ಈ ಕಾರ್ಯಕ್ರಮಕ್ಕೆ ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ನಾಟಕ ಸಭಾ ಮತ್ತು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಅನ್ನಪೂರ್ಣೇಶ್ವರಿ ಭಜನಾ ಸಂಘ ಸಹಕಾರವನ್ನು ನೀಡಿತು.
Subscribe to Updates
Get the latest creative news from FooBar about art, design and business.
ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಉದ್ಘಾಟನೆಗೊಂಡ ‘ರಜತ ರಂಗ’ ಅಭಿಯಾನ
No Comments2 Mins Read
Previous Articleಪುತ್ತೂರಿನಲ್ಲಿ ಉದ್ಘಾಟನೆಗೊಂಡ ದ. ಕ. ಜಿಲ್ಲಾ 10ನೇ ಗಮಕ ಸಮ್ಮೇಳನ
Next Article ಉಡುಪಿಯಲ್ಲಿ ‘ಛತ್ರಪತಿ ಶಿವಾಜಿ’ | ಅಕ್ಟೋಬರ್ 25
