Subscribe to Updates

    Get the latest creative news from FooBar about art, design and business.

    What's Hot

    “ಪ್ರತಿಯೊಬ್ಬ ವ್ಯಕ್ತಿಯ ಒಳಗೊಬ್ಬ ಕಲಾವಿದನಿರ್ತಾನೆ” – ಕಾಸರಗೋಡು ಚಿನ್ನಾ

    June 2, 2025

    ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿಯಿಂದ ಅರೆಭಾಷೆ ಕಥೆ ಬರೆಯುವ ಕಾರ್ಯಾಗಾರ

    June 2, 2025

    ‘ಬಾಳ ಹಾದಿಯಲಿ ಬೆಳ್ಳಿ ಚುಕ್ಕಿ’ ಕಾದಂಬರಿಗೆ ಇಂಡಿಯನ್ ಐಕಾನ್ ಅವಾರ್ಡ್

    June 2, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಶಕ್ತಿನಗರದ ಕಲಾಂಗಣದಲ್ಲಿ ‘ಸುರ್‌ ಸೊಭಾಣ್‌’ ಗಾಯನ ತರಬೇತಿ ಉದ್ಘಾಟಣೆ 
    Music

    ಶಕ್ತಿನಗರದ ಕಲಾಂಗಣದಲ್ಲಿ ‘ಸುರ್‌ ಸೊಭಾಣ್‌’ ಗಾಯನ ತರಬೇತಿ ಉದ್ಘಾಟಣೆ 

    August 19, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಮಂಗಳೂರು : ‘ಸುರ್ ಸೊಭಾಣ್’ ಮಕ್ಕಳ ಗಾಯನ ತರಬೇತಿಯ ಉದ್ಘಾಟನಾ ಸಮಾರಂಭವು 18 ಆಗಸ್ಟ್ 2024ರಂದು ಮಂಗಳೂರಿನ ಶಕ್ತಿನಗರದಲ್ಲಿರುವ ಕಲಾಂಗಣದಲ್ಲಿ ನಡೆಯಿತು.
    ಕಾರ್ಯಕ್ರಮವನ್ನು ಉದ್ಘಾಟಿಸಿದ ‘ಸೋದ್ 4’  ಗಾಯನ ಸ್ಪರ್ಧೆಯ ವಿಜೇತೆ ಜ್ಯಾಕ್ಲಿನ್ ಫೆರ‍್ನಾಂಡಿಸ್ ಯು. ಎಸ್ ಮಾತನಾಡಿ “‘ಮಾಂಡ್‌ ಸೊಭಾಣ್‌’ ಪ್ರತಿಭೆಗಳಿಗೆ ಪ್ರೋತ್ಸಾಹ ಹಾಗೂ ವೇದಿಕೆ ನೀಡುತ್ತದೆ. ನಾನು ಕೂಡಾ ಗಾಯನ ಕ್ಷೇತ್ರದಲ್ಲಿ ಏನಾದರೂ ಹೆಸರು ಮಾಡಿದ್ದರೆ ಅದರಲ್ಲಿ ಈ ಸಂಸ್ಥೆಯ ತರಬೇತಿಯ ಕೊಡುಗೆ ಬಹಳಷ್ಟಿದೆ. ನಾವು ದಿನಂಪ್ರತಿ ಕಲಿಯಬೇಕು. ಲಭ್ಯ ಅವಕಾಶಗಳನ್ನು ಬಳಸಿಕೊಳ್ಳಬೇಕು. ಇಲ್ಲಿಂದ ಚೆನ್ನಾಗಿ ಕಲಿತು ಹೋದರೆ, ಗೆದ್ದು ಬಂದರೆ ಇಡೀ ಪ್ರಪಂಚ ನಿಮ್ಮನ್ನು ಗಮನಿಸುತ್ತದೆ. ‘ಸುರ್ ಸೊಭಾಣ್’ ಕಲಿಕೆಯ ನಂತರ ಸಿಡಿ, ಸಿನೆಮಾ ಹಾಗೂ ವೇದಿಕೆಗಳಲ್ಲಿ ಅವಕಾಶ ದೊರೆಯುವಾಗ ಈ ಅಭ್ಯಾಸದ ಮಹತ್ವ ನಿಮ್ಮರಿವಿಗೆ ಬರುತ್ತದೆ.” ಎಂದರು.
    ವಿದ್ಯಾರ್ಥಿಗಳಾದ ಎಲ್ಡನ್‌ ಪಿರೇರಾ, ಲೆನ್ವಿನ್‌ ಪಿರೇರಾ, ಪ್ರೇರಣ್‌ ಕ್ರಾಸ್ತಾ, ಸಿಮೊನಾ ಸಲ್ಡಾನ್ಹಾ, ಸಂಜನಾ ಮತಾಯಸ್‌, ಆನ್ವಿಯಾ ಲೋಬೊ ಹಾಗೂ ಆಲ್ವಿನಾ ಮೊಂತೇರೊ ಈ ಏಳು ಮಕ್ಕಳಿಗೆ ಸಪ್ತ ಸ್ವರಗಳನ್ನು ಪ್ರತಿನಿಧಿಸುವ ಕುರುಹುಗಳನ್ನು ಶೃಂಗರಿಸಿದ ಬೇಝ್ ಡ್ರಮ್ ನಿಂದ ಹೊರ ತೆಗೆದು ನೀಡಲಾಯಿತು. ನಂತರ 60ಗಂಟೆಗಳ ಕಲಿಕಾ ಪುಸ್ತಕವನ್ನು ತೆಗೆದು ಲೋಕಾರ್ಪಣೆಗೊಳಿಸಿ, ಮುಖ್ಯ ತರಬೇತುದಾರರಾದ ಶಿಲ್ಪಾ ಕುಟಿನ್ಹಾ ಇವರಿಗೆ ಹಸ್ತಾಂತರಿಸಿದರು.
     ತರಬೇತಿಗೆ ಶುಭ ಹಾರೈಸಿ ಮಾತನಾಡಿದ ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ “ನೀವು ಬರುವುದು, ಹಾಡುವುದು ಹಾಗೂ ಹೋಗುವುದು ಈ ರೀತಿ ಆಗಬಾರದು. ಈ ವಿಭಾಗದಲ್ಲಿ ಅತ್ಯುತ್ತಮರಾಗಬೇಕು. ಕಲಿಕೆಯನ್ನು ಚೆನ್ನಾಗಿ ಮನನ ಮಾಡಿ ಸದಾ ಅಭ್ಯಾಸ ನಡೆಸಬೇಕು.”ಎಂದರು.
    ಮಾಂಡ್‌ ಸೊಭಾಣ್‌ ಅಧ್ಯಕ್ಷ ಲುವಿ ಜೆ. ಪಿಂಟೊ, ಸಹ ತರಬೇತುದಾರ ಡಿಯಲ್ ಡಿ’ಸೋಜ ಹಾಜರಿದ್ದರು. ‘ಸುಮೇಳ್‌’ ಸಂಯೋಜಕಿ ರೈನಾ ಸಿಕ್ವೇರಾ ಸ್ವಾಗತಿಸಿ, ಸುಮೇಳ್‌ ಸದಸ್ಯೆ ಪ್ರೀಮಾ ಫೆರಾವೊ ನಿರೂಪಿಸಿ ವಂದಿಸಿದರು. ತರಬೇತಿ ಬಗ್ಗೆ ವಿಕ್ಟರ್‌ ಮತಾಯಸ್ ಮಾಹಿತಿ ನೀಡಿದರು. ಅರುಣ್‌ ರಾಜ್‌ ರೊಡ್ರಿಗಸ್ ಕೆಲ ಆಟಗಳನ್ನು ಆಡಿಸಿದರು. ನಂತರ ಮೊದಲ ದಿನದ  ತರಬೇತಿ ನಡೆಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಸುಲೋಚನಾ ಪಚ್ಚಿನಡ್ಕ ಇವರ ನಾಲ್ಕು ಕೃತಿಗಳ ಲೋಕಾರ್ಪಣೆ | ಆಗಸ್ಟ್ 24
    Next Article ‘ಶ್ರಾವಣ ಸಂಭ್ರಮ’ದಲ್ಲಿ ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು
    roovari

    Comments are closed.

    Related Posts

    ಕಾಸರಗೋಡಿನಲ್ಲಿ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಜನ್ಮದಿನೋತ್ಸವ ಸಂಭ್ರಮ | ಜೂನ್ 08

    June 2, 2025

    ಯಶಸ್ವಿ ಕಲಾವೃಂದದಿಂದ ಗಾನ ಗಾರುಡಿಗ ದಿ. ಕಾಳಿಂಗ ನಾವಡರಿಗೆ ಗಾನ ನಮನ

    June 2, 2025

    ಯಕ್ಷಗಾನ ಕಲಾರಂಗದ ಸುವರ್ಣ ಸಡಗರದಲ್ಲಿ ಯಕ್ಷಗಾನ ಕಲಾವಿದರ

    June 2, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.