ಬೆಂಗಳೂರು : ರಂಗ ಸೌರಭ ಅರ್ಪಿಸುವ ‘ಸೌರಭ -2025’ ರಾಜ್ಯ ಮಟ್ಟದ ಅಂತರ ಕಾಲೇಜು ರಂಗ ಸ್ಪರ್ಧೆಗಳನ್ನು ದಿನಾಂಕ 18 ಫೆಬ್ರವರಿ 2025ರಿಂದ 01 ಮಾರ್ಚ್ 2025ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ‘ಸಂಸ ಬಯಲು ರಂಗಮಂದಿರ’ದಲ್ಲಿ ಆಯೋಜಿಸಲಾಗಿದೆ.
ಹಿರಿಯ ಚಲನಚಿತ್ರ ನಟರಾದ ಶ್ರೀ ಅನಂತ್ ನಾಗ್ ಇವರು ಉದ್ಘಾಟನೆ ಮಾಡಲಿದ್ದು, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜಮೂರ್ತಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.