ಉಡುಪಿ : ಯಕ್ಷಾಕ್ಷರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ.) ಬೋಳ ಇದರ ವತಿಯಿಂದ ‘ಅಕ್ಷರಾಮೃತ’ ರಜತ ಸಂಭ್ರಮದ ಉದ್ಘಾಟನಾ ಸಮಾರಂಭವನ್ನು ದಿನಾಂಕ 13 ಏಪ್ರಿಲ್ 2025ರಂದು ಸಂಜೆ 4-30 ಗಂಟೆಗೆ ವಂಜಾರಕಟ್ಟೆ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಯಕ್ಷಾಕ್ಷರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಕೇಶವ ಆಚಾರ್ಯ ಇವರು ಅಧ್ಯಕ್ಷತೆ ವಹಿಸಲಿದ್ದು, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ ಇವರು ಈ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ರಜತ ಸಂಭ್ರಮದ ಲೋಗೋ ಬಿಡುಗಡೆ, ಯಕ್ಷಾಕ್ಷರ ರಜತ ಪ್ರಶಸ್ತಿ ಪ್ರದಾನ ಹಾಗೂ ಪರಿಸರ ಜಾಗ್ರತಿ ಅಭಿಯಾನದ ಕರಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಸಂಜೆ 4-30 ಗಂಟೆಗೆ ‘ಶ್ರೀರಾಮ ದರ್ಶನ’ ಹಾಗೂ ರಾತ್ರಿ 8-00 ಗಂಟೆಗೆ ‘ಗಿರಿಜಾ ಕಲ್ಯಾಣ’ ಎಂಬ ಪ್ರಸಂಗದ ಯಕ್ಷಗಾನ ವಿದ್ಯಾರ್ಥಿಗಳಿಂದ ಪ್ರಸ್ತುತಗೊಳ್ಳಲಿದೆ.