ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.) ಇದರ ನವೀಕೃತ ‘ಸಾಹಿತ್ಯ ಸದನ’ ಉದ್ಘಾಟನಾ ಸಮಾರಂಭವು ದಿನಾಂಕ 13-07-2024ರಂದು ಮಂಗಳೂರಿನ ಉರ್ವಸ್ಟೋರಿನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕರರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಶ್ರೀಮತಿ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಇವರು ಉದ್ಘಾಟಿಸಲಿದ್ದು, ಸಂಸದರಾದ ಮಾನ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಮಾನ್ಯ ಡಿ. ವೇದವ್ಯಾಸ ಕಾಮತ್, ಕ.ಸಾ.ಪ.ದ ಅಧ್ಯಕ್ಷರಾದ ಡಾ. ಶ್ರೀನಾಥ ಎಂ.ಪಿ., ಎಂ.ಆರ್.ಪಿ.ಎಲ್.ನ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಕೃಷ್ಣ ಹೆಗ್ಡೆ, ಕಾರ್ಪೊರೇಟರ್ ಶ್ರೀ ಗಣೇಶ ಕುಲಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಹಿರಿಯ ಲೇಖಕರಾದ ಶ್ರೀಮತಿ ಇಂದಿರಾ ಹಾಲಂಬಿ ಮತ್ತು ಹಿರಿಯ ವಾಚಕರಾದ ಶ್ರೀಮತಿ ಶಕುಂತಲಾ ಟಿ. ಶೆಟ್ಟಿ ಇವರ ಗೌರವ ಉಪಸ್ಥಿತಿಯಲ್ಲಿ ಪ್ರಾಧ್ಯಾಪಕರಾದ ಡಾ. ಸಬಿತಾ ಬನ್ನಾಡಿ ಯವರು ಮುನ್ನೋಟದ ಮಾತುಗಳನ್ನಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಕ್ಷತಾ ಬೈಕಾಡಿ ಹಾಗೂ ಕಲಾಶ್ರೀ ವಿದುಷಿ ರಾಜಶ್ರೀ ಮತ್ತು ಬಳಗ ಇವರಿಂದ ನೃತ್ಯ ಮತ್ತು ಜಯಲಕ್ಷ್ಮೀ ಶಾಸ್ತ್ರಿ, ಆಕೃತಿ ಭಟ್, ರಂಜಿನಿ ಶೆಟ್ಟಿ, ಜ್ಯೋತಿ ಗುರುಪ್ರಸಾದ್, ಶಶಿಕಲಾ ಸಾಲ್ಯಾನ್, ರತ್ನಾವತಿ ಜೆ. ಬೈಕಾಡಿ, ಗೀತಾ ಮಲ್ಯ, ಜಯಲಕ್ಷ್ಮೀ ಬಾಲಕೃಷ್ಣ , ರಾಧಾ ಮುರಳೀಧರ್, ರೂಪಶ್ರೀ ನಾಗರಾಜ್ ಇವರುಗಳು ಭಾವಗಾನ ಕಾರ್ಯಕ್ರಮ ನೀಡಲಿದ್ದಾರೆ.