ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಇದರ ವತಿಯಿಂದ ಶ್ರೀ ವಿಶ್ವೇಶತೀರ್ಥ ಸಭಾಂಗಣದ ಉದ್ಘಾಟನಾ ಸಮಾರಂಭವನ್ನು ದಿನಾಂಕ 13 ಸೆಪ್ಟೆಂಬರ್ 2025ರಂದು ಸುರತ್ಕಲ್ ನಾಗಬನ ರೋಡ್ ಇಲ್ಲಿರುವ ಅನುಪಲ್ಲವಿಯಲ್ಲಿ ಆಯೋಜಿಸಲಾಗಿದೆ.
ಇದೇ ಸಂದರ್ಭದಲ್ಲಿ ವಿದ್ವಾನ್ ಡಿ. ಅನ್ನು ದೇವಾಡಿಗ, ಬಿ. ಸೀತಾರಾಮ ತೊಳ್ಪಾತ್ತಾಯ ಮತ್ತು ಕುಮಾರಿ ರೆಮೋನಾ ಎವೆಟ್ ಪಿರೇರಾ ಇವರನ್ನು ಸನ್ಮಾನಿಸಲಾಗುವುದು. ಬಳಿಕ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ದಿವ್ಯಾಶ್ರೀ ಇವರ ಹಾಡುಗಾರಿಕೆಗೆ ತನ್ಮಯಿ ಉಪ್ಪಂಗಳ ಇವರು ವಯೋಲಿನ್, ಪನ್ನಗ ಶರ್ಮನ್ ಮೃದಂಗ ಮತ್ತು ಸುಜಾತಾ ಎಸ್. ಭಟ್ ತಂಬೂರದಲ್ಲಿ ಸಹಕರಿಸಲಿದ್ದಾರೆ.