ಮಂಗಳೂರು : ಕೊಲ್ಯದ ಸಂತ ಜೋಸೆಪ್ ಜೋಯ್ ಲ್ಯಾಂಡ್ ಶಾಲೆ ಮತ್ತು ಚಿತ್ತಾರ ಪ್ರತಿಷ್ಠಾನ ಪಿಲಾರು ಇದರ ವತಿಯಿಂದ 19ನೇ ವರ್ಷದ ವಿವಿಧ ಶಾಲಾ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 15-04-2024ರಂದು ಜರಗಿತು.
ಈ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಕೊಲ್ಯದ ಸಂತ ಜೋಸೆಪ್ ಜೋಯ್ ಲ್ಯಾಂಡ್ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಭಟ್ “ಮಕ್ಕಳ ಕ್ರಿಯಾತ್ಮಕ ಚಟುವಟಿಕೆ ಹಾಗೂ ತಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಇಂತಹ ಶಿಬಿರಗಳು ಬಹಳ ಸಹಕಾರಿ” ಎಂದು ಅಭಿಪ್ರಾಯಪಟ್ಟರು.
ದೈಹಿಕ ಶಿಕ್ಷಕರಾದ ಶ್ರೀಯುತ ನಾಗಪ್ಪ ಪನೋಲಿಬೈಲ್ ಹಾಗೂ ಶಿಬಿರದ ನಿರ್ದೇಶಕರಾದ ಶ್ರೀಯತ ನವೀನ್ ಪಿಲಾರು ಉಪಸ್ಥಿತರಿದ್ದರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ರಂಗ ನಿರ್ದೇಶಕರಾದ ಶ್ರೀ ಜಗನ್ ಪವಾರ್ ಇವರು ರಂಗ ತರಬೇತಿ ಬಗ್ಗೆ, ಕುಂಬಳೆ ಶಾಲೆಯ ಶಿಕ್ಷಕರಾದ ಶ್ರೀ ರಾಜು ಕಿದೂರು ಪ್ರಾಣಿ ಪಕ್ಷಿಗಳ ಬಗ್ಗೆ, ತೊಕ್ಕೊಟ್ಟು ಶಾಲೆಯ ಚಿತ್ರಕಲಾ ಶಿಕ್ಷಕರಾದ ಶ್ರೀ ಚಂದ್ರಾಡ್ಕಾರ್ ಮತ್ತು ಚಿತ್ರ ಕಲಾವಿದ ಶ್ರೀ ನವೀನ್ ಆಡ್ಕರ್ ಇವರು ಚಿತ್ರಕಲೆ ಮತ್ತು ಕರಕುಶಲ ಕಲೆಯ ಬಗ್ಗೆ, ಶ್ರೀ ಸುನೀಲ್ ಅತ್ತಾವರ ಸಾಮಾನ್ಯ ಜಾನ್ಞದ ಬಗ್ಗೆ ಮತ್ತು ಶ್ರೀಮತಿ ಪ್ರಮೋದ ಯೋಗದ ಬಗ್ಗೆ ಮಾಹಿತಿ ನೀಡಿದರು.