ಸಾಸ್ತಾನ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡ್ಮಿ, ಸಾಸ್ತಾನದಲ್ಲಿ ಯಶಸ್ವೀ ಕಲಾವೃಂದ (ರಿ.)ಕೊಮೆ ತೆಕ್ಕಟ್ಟೆ ಸಂಯೋಜನೆಯಲ್ಲಿ ‘ಶಾಲೆಗಳಲ್ಲಿ ಒಡ್ಡೋಲಗ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 17 ಸೆಪ್ಟೆಂಬರ್ 2024ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡ್ಮಿ, ಸಾಸ್ತಾನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀವಟಿಕೆಗೆ ಎಣ್ಣೆ ಹಾಕುವುದರ ಮೂಲಕ ಉದ್ಘಾಟಿಸಿದ ಯಕ್ಷಗಾನದ ಅಭಿಮಾನಿ ಹಂದಾಡಿ ಆ್ಯಂದ್ರು ಡಿ’ಸಿಲ್ವ ಮಾತನಾಡಿ “ಯಕ್ಷಗಾನ ಕಲಾ ಪ್ರೇಮಿಗಳ ಜೀವ. ಯಕ್ಷಗಾನದಲ್ಲಿ ಪೂರ್ವರಂಗ ಅತ್ಯಂತ ಮುಖ್ಯವಾಗಿತ್ತು. ಹಿಂದಿನ ಕಾಲದಲ್ಲಿ ಪೂರ್ವರಂಗದಲ್ಲಿಯೇ ಹೆಚ್ಚಿನ ಕಲಾವಿದರು ಪಳಗಿ ಮುಖ್ಯ ವೇಷಧಾರಿಗಳಾಗುತ್ತಿದ್ದರು. ಪ್ರಸ್ತುತ ಕಾಲಘಟ್ಟದಲ್ಲಿ ಯಕ್ಷಗಾನ ಫಾಸ್ಟ್ ಫುಡ್ ತರಹ ಆಗಿಹೋಗಿದೆ. ಪೂರ್ವರಂಗದ ಯಾವುದೇ ಭಾಗಗಳಿಲ್ಲದೇ ನೇರವಾಗಿ ಪ್ರಸಂಗ ಪ್ರಸ್ತುತಿಗೆ ಯಕ್ಷಗಾನ ಮೊದಲಾಗುತ್ತಿದ್ದಾರೆ. ಪೂರ್ವರಂಗವನ್ನು ಕೇಳುವ, ಮಾಡುವ, ನೋಡುವ ಸಹನೆ ಯಾರಲ್ಲಿಯೂ ಇಲ್ಲ. ಯಶಸ್ವೀ ಕಲಾವೃಂದ ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ.” ಎಂದರು
ಪಟ್ಟಣ ಪಂಚಾಯತ್ ಸದಸ್ಯರಾದ ಸುಲತಾ ಹೆಗ್ಡೆ ಮಾತನಾಡಿ “ಮಕ್ಕಳ ಮೂಲಕ ಮಕ್ಕಳಿಗೆ ಕಲೆಯನ್ನು ಬಿತ್ತರಿಸುವ ಕೆಲಸ ಬಹಳ ಸಂತೋಷವಾಗುತ್ತದೆ. ಮಕ್ಕಳಿಗೆ ಈ ಕಾರ್ಯಕ್ರಮ ಅತ್ಯಂತ ಹತ್ತಿರವಾಗುತ್ತದೆ. ಮಕ್ಕಳನ್ನು ಪ್ರಬುದ್ಧ ಕಲಾವಿದರನ್ನಾಗಿ ಮಾಡಿ ಸಮಾಜಕ್ಕೆ ಕೊಡುಗೆಯಾಗಿಸುವ ಸಂಸ್ಥೆಯ ಕೆಲಸವನ್ನು ಮೆಚ್ಚಲೇ ಬೇಕು. ಸರಕಾರಿ ಶಾಲೆಗಳನ್ನೇ ಆಯ್ದುಕೊಂಡು ಮಕ್ಕಳಿಗೆ ಕಲೆಯನ್ನು ಪರಿಚಯಿಸುತ್ತಿರುವುದು ಸಂಸ್ಥೆಯ ಬಗೆಗೆ ಹೆಮ್ಮೆ ಮೂಡಿಸುತ್ತದೆ.” ಎಂದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುದರ್ಶನ ಉರಾಳ, ಎಸ್. ಡಿ. ಎಮ್. ಸಿ ಅಧ್ಯಕ್ಷೆ ವಿಜಯಲಕ್ಷ್ಮೀ, ರೊಟೇರಿಯನ್ ಲೀಲಾವತಿ ಗಂಗಾಧರ, ರವೀಂದ್ರ ಕಾಮತ್, ರೊಟೇರಿಯನ್ ಮನೋಜ್ ಕುಮಾರ್, ಮುಖ್ಯೋಪಾಧ್ಯಾಯರಾದ ಉಷಾ ಉಪಸ್ಥಿತರಿದ್ದರು. . ಶ್ರೀಮತಿ ರವಿಕಲಾ ಕಾರ್ಯಕ್ರಮ ನಿರೂಪಿಸಿ, ಗುಲಾಬಿ ಮೇಡಂ ವಂದಿಸಿದರು.
Subscribe to Updates
Get the latest creative news from FooBar about art, design and business.
Previous Articleಶ್ರೀ ಶಾರದಾ ನಾಟ್ಯಾಲಯದ ‘ತ್ರಿದಶ ನಾಟ್ಯ ಕಲೋತ್ಸವ’ದ ಉದ್ಘಾಟನೆ
Related Posts
Comments are closed.