ಪುತ್ತೂರು : ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ (ರಿ.) ಇದರ ವತಿಯಿಂದ ಸ್ಥಾಪಕ ಗುರು, ಸಂಗೀತ ರತ್ನ ಋಷಿ ಗಂಧರ್ವ ವಿ. ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರ 105ನೇ ಜನ್ಮ ವರ್ಷ ಮಹೋತ್ಸವದ ಅಂಗವಾಗಿ ಪುತ್ತೂರು ಕಾಂಚನದಲ್ಲಿ ನಿರ್ಮಾಣವಾಗಿರುವ ನೂತನ ಸಂಗೀತ ಕಲಾ ಶಾಲೆ, ಸಭಾಭವನ ಹಾಗೂ ಭೋಜನ ಶಾಲೆಯ ಲೋಕಾರ್ಪಣೆ, 72ನೇ ವರ್ಷದ ‘ಕಾಂಚನೋತ್ಸವ-2026’ ಕಾರ್ಯಕ್ರಮ ದಿನಾಂಕ 05ರಿಂದ 07 ಫೆಬ್ರುವರಿ 2026ರ ತನಕ ನಡೆಯಲಿದೆ.
ದಿನಾಂಕ 05 ಫೆಬ್ರುವರಿ 2026ರಂದು 72ನೇ ವರ್ಷದ ಶ್ರೀ ತ್ಯಾಗರಾಜ, ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ, ಸ್ಥಾಪಕ ಗುರು, ಸಂಗೀತ ರತ್ನ ಕಾಂಚನ ವೆಂಕಟಸುಬ್ರಮಣ್ಯಂ ಹಾಗೂ ಕರ್ನಾಟಕ ಕಲಾಶ್ರೀ ಕಾಂಚನ ವಿ. ಸುಬ್ಬರತ್ನಂ ಪುಣ್ಯ ಸ್ಮರಣೆಯ ಅಂಗವಾಗಿ ಆರಂಭ ಸ್ತುತಿಯಲ್ಲಿ ಸಂವಿತ್ ಆರ್.ಎಸ್. ಅವರು ತಬಲ, ಕೆ.ಜೆ. ಋತ ವಯಲಿನ್ ನುಡಿಸಲಿದ್ದಾರೆ. ಸಂಜೆ 6-15ರಿಂದ ನಡೆಯುವ ಸ್ವರ ಲಯ ಲಹರಿಯಲ್ಲಿ ಕೆ.ಜೆ. ಋತ, ಅಭಯ್ ಸಂಪಿಗೆತ್ತಾಯ, ಶ್ರೀಕೃಷ್ಣ ಭಟ್, ತೇಜಸ್ವಿ ಸಂಜಯ್, ವರ್ಚಸ್ ವಿ. ಅಪ್ರಮೇಯ ಹೊಸಹಳ್ಳಿ, ಸಂವಿತ್ ಆರ್.ಎಸ್., ಶಮಿತ್ ಕಲ್ಕೂರ್, ಸಾಕೇತರಾಮ್ ಫಣಿ ವೇದಾಲ ಅವರು ಸಂಗೀತ ವಾದ್ಯಗಳನ್ನು ನುಡಿಸಲಿದ್ದಾರೆ. ಸಂಜೆ 7-00ರಿಂದ ಕಾಂಚನ ಶ್ರೀ ಮ್ಯೂಸಿಕ್ ಅಕಾಡೆಮಿ ಶಿಷ್ಯರು, ಪ್ರಶಿಷ್ಯರು ಮತ್ತು ಅತಿಥಿ ಕಲಾವಿದರಿಂದ ಸಂಗೀತ ಸೇವೆ ನಡೆಯಲಿದೆ.
ದಿನಾಂಕ 06 ಫೆಬ್ರುವರಿ 2026ರಂದು ಬೆಳಗ್ಗೆ 10-44ರ ವೇಳೆಗೆ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾ ಶಾಲೆ, ಸಭಾಭವನ ಹಾಗೂ ಭೋಜನ ಶಾಲೆ ಪ್ರವೇಶೋತ್ಸವ ನಡೆಯಲಿದೆ. ಈ ವೇಳೆ ಕಾಂಚನ ಮ್ಯೂಸಿಕ್ ಅಕಾಡೆಮಿ ಶಿಷ್ಯರು, ಪ್ರಶಿಷ್ಯರು ಹಾಗೂ ರಾಜ್ಯದ ವಿವಿಧೆಡೆಯಿಂದ ಆಗಮಿಸಲಿರುವ ಅತಿಥಿ ವೃಂದದವರಿಂದ ವಿದ್ವಾನ್ ಕಾಂಚನ ವೆಂಕಟ ಸುಬ್ರಹಣ್ಯಂ ಅವರ 105ನೇ ಜನ್ಮದಿನದ ಪುಣ್ಯವರ್ಷದ ಪ್ರಯುಕ್ತ ‘ಶತಾಧಿಕ ಕಂಠಗಾಯನ ಮತ್ತು ವಾದನ’ ನಡೆಯಲಿದೆ. ಬೆಳಗ್ಗೆ 11-30ರಿಂದ ಅಭಿಷೇಕ್ ಎನ್.ಎಸ್. ಮತ್ತು ತಂಡದವರಿಂದ ನಡೆಯುವ ಗಾಯನಕ್ಕೆ ವಯಲಿನ್ ನಲ್ಲಿ ಅಭಯ್ ಸಂಪಿಗೆತ್ತಾಯ, ದ್ವಂದ್ವ ಮೃದಂಗದಲ್ಲಿ ಕಾಂಚನ ಈಶ್ವರ ಭಟ್ ಮತ್ತು ಅಕ್ಷಯ್ ನಾರಾಯಣ ಸಹಕರಿಸಲಿದ್ದಾರೆ. ಮಧ್ಯಾಹ್ನ ಸಂಗೀತ ಸೇವೆ, ಸಂಜೆ 4-30ರಿಂದ ಸಂಗೀತ ಕಲಾಶಾಲೆ ಮತ್ತು ಸಭಾಭವನದ ಲೋಕಾರ್ಪಣಾ ಸಮಾರಂಭ ನಡೆಯಲಿದ್ದು, ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಪರಂಪರಾ ವಿದ್ಯಾಪೀಠದ ಮುಖ್ಯ ಪ್ರಾಚಾರ್ಯ ವೇ. ಬ್ರ. ವಿಷ್ಣುಪ್ರಸಾದ್ ಹೆಬ್ಬಾರ್ ಭಾಗವಹಿಸಲಿದ್ದಾರೆ. 6-30ರಿಂದ ‘ಕಿಂಗ್ ಆಫ್ ಡ್ರಮ್ಸ್’ ಪದ್ಮಶ್ರೀ ಕಲೈಮಾಮಣಿ ಶಿವಮಣಿ ಹಾಗೂ ನಾಡಿನ ಹಿರಿಯ ಸಂಗೀತ ವಿದ್ವಾಂಸರಾದ ಕಾಂಚನ ಸಹೋದರಿಯರಾದ ಕಾಂಚನ ಶ್ರೀರಂಜನಿ ಮತ್ತು ಕಾಂಚನ ಶ್ರುತಿರಂಜನಿ ಇವರಿಂದ ದ್ವಂದ್ವ ಗಾಯನ, ಕಾಂಚನ ಸುಮನ ಸರಂಜನಿ, ರವಿಚಂದ್ರ ಕೂಳೂರು, ಕೆ.ಯು. ಜಯಚಂದ್ರ ರಾವ್ ಸಂಗೀತ ವಾದ್ಯ ನುಡಿಸಲಿದ್ದಾರೆ.
ದಿನಾಂಕ 07 ಫೆಬ್ರುವರಿ 2026ರಂದು ಬೆಳಗ್ಗೆ 8-30ಕ್ಕೆ ವಿದುಷಿ ಚಾರುಲತಾ ರಾಮಾನುಜಂ ನೇತೃತ್ವದಲ್ಲಿ ಕಾಂಚನ ಮನೆಯಿಂದ ಸಂಗೀತ ಶಾಲೆಯ ತನಕ, ಉಂಭವೃತ್ತಿ ಸಂಗೀತ ನಡಿಗೆ ನಡೆಯಲಿದೆ. ಬೆಳಗ್ಗೆ 10-00ಕ್ಕೆ ಪಿಳ್ಳಾರಿ ಗೀತೆಗಳು ಮತ್ತು ಪಂಚರತ್ನ ಕೃತಿಗಳ ಗೋಷ್ಠಿ ಗಾಯನ, 11-30ರಿಂದ ಸಂಗೀತ ಸೇವೆ ನಡೆಯಲಿದೆ. ಸಂಜೆ ಗಂಟೆ 5-00 ಕ್ಕೆ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ‘ಗಾಡ್ ಆಫ್ ಇಂಡಿಯನ್ ವಯಲಿನ್’ ಪದ್ಮವಿಭೂಷಣ ಡಾ. ಎಲ್. ಸುಬ್ರಹ್ಮಣ್ಯಂ ಇವರಿಗೆ ‘ಕಾಂಚನ ಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಲೋಕಸಭಾ ಸದಸ್ಯೆ ಬಾನ್ಸುರಿ ಸ್ವರಾಜ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಂಜೆ ಗಂಟೆ 6-30ರಿಂದ ಸುರ-ಸಂಗೀತ ಕಾರ್ಯಕ್ರಮ ಪದ್ಮವಿಭೂಷಣ ಡಾ. ಎಲ್. ಸುಬ್ರಹ್ಮಣ್ಯಂ ಮತ್ತು ಪದ್ಮಶ್ರೀ ಕವಿತಾ ಕೃಷ್ಣಮೂರ್ತಿ ಸುಬ್ರಹ್ಮಣ್ಯಂ ನಡೆಸಿ ಕೊಡಲಿದ್ದಾರೆ. ಪಂಡಿತ್ ಅದಿತ್ಯ ಓ.ಕೆ., ವಿದ್ವಾನ್ ವಿ.ವಿ. ರಮಣಮೂರ್ತಿ, ಪಂಡಿತ್ ನಿನಾದ್ ಮೂಲೋಕರ್, ಪಂಡಿತ್ ಪ್ರಸಾದ್ ಪಧ್ಯೆ. ಪಂಡಿತ್ ಸಂದೇಶ್ ಕದಮ್ ಸಂಗೀತ ವಾದ್ಯಗಳನ್ನು ನುಡಿಸಲಿದ್ದಾರೆ.

