ತುಮಕೂರು : ಕನ್ನಡ ರಂಗಭೂಮಿಯ ಮಕ್ಕಳ ರಂಗಭೂಮಿಯಲ್ಲಿ ವಿಶಿಷ್ಟ ಕಾರ್ಯ ಮಾಡುತ್ತಿರುವ ತುಮಕೂರು ಜಿಲ್ಲೆಯ ಡಮರುಗ ರಂಗ ಸಂಪನ್ಮೂಲ ಕೇಂದ್ರ 20 ವರ್ಷಗಳಿಂದ ಒಂದು ತಿಂಗಳ ಪೂರ್ಣಾವಧಿ ‘ಚಿಣ್ಣರ ಬಣ್ಣದ ಶಿಬಿರ’ವನ್ನ ಆಯೋಜಿಸುತ್ತಿದ್ದು, ಈ ವರ್ಷ ದಿನಾಂಕ 11-04-2024 ಗುರುವಾರ ಬೆಳಗ್ಗೆ 10-00 ಗಂಟೆಗೆ ಶಿಬಿರವನ್ನು ಉದ್ಘಾಟಿಸಲಾಯಿತು.
ಜನಪದ ಆಟಗಳು, ಜನಪದ ನೃತ್ಯ, ಕಸದಲ್ಲಿ ಕಲೆ, ಆಟಿಕೆಗಳು, ರಂಗಾಟಗಳು ಜೊತೆಜೊತೆಗೆ ರಂಗಪಠ್ಯಗಳೊಂದಿಗೆ ಒಂದು ನಾಟಕವನ್ನು ತರಬೇತುಗೊಳಿಸುತ್ತಾರೆ. ಶಿಬಿರ ಸಂಪೂರ್ಣ ಉಚಿತವಾಗಿದ್ದು ಮಧ್ಯಾಹ್ನದ ಬಿಸಿ ಊಟದ ವ್ಯವಸ್ಥೆ ಇರುತ್ತದೆ. ಪ್ರತಿ ವರ್ಷ 50ರಿಂದ 60 ಮಕ್ಕಳು ಇದರ ಉಪಯೋಗ ಪಡೆಯುತ್ತಿದ್ದು, ಕನ್ನಡ ರಂಗಭೂಮಿಯಲ್ಲೇ ಇದೊಂದು ವಿಶೇಷವಾದದ್ದು.
ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಮೆಳೇಹಳ್ಳಿ ದೇವರಾಜ್, ಪ್ರಕಾಶ್ ಮೆಳೇಹಳ್ಳಿ, ಸ್ನೇಹ, ಚಿನ್ಮಯ, ನಾಗೇಶ್, ನಂದೀಶ್, ಪ್ರಸಾದ್, ಮಧುಸೂದನ್ ರಾವ್, ರವಿಶಂಕರ್, ಸುಧಾ, ಲಯ ಎಂ.ಡಿ, ರಾಜೇಶ್ವರಿ, ಸವಿತಾ, ಮೈಸೂರ್ ರಮಾನಂದ್ ಮುಂತಾದವರು ಭಾಗವಹಿಸುತ್ತಾರೆ.