ಮಂಗಳೂರು : ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಹಾಗೂ ಗ್ರಂಥಾಲಯದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭವು ದಿನಾಂಕ 25 ಮೇ 2025ರಂದು ಅಪರಾಹ್ನ 2-00 ಗಂಟೆಗೆ ಮಂಗಳೂರು ಉರ್ವಸ್ಟೋರಿನ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಸಭಾ ಭವನದಲ್ಲಿ ನಡೆಯಲಿದೆ.
ಕನ್ನಡ ಭವನ ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸುವರು. ಡಾ. ರವೀಂದ್ರ ಜೆಪ್ಪು ದೀಪ ಬೆಳಗಿಸುವರು. ಕೆ. ಉದಯ ಕುಮಾರ ಮಂಗಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರದೀಪ್ ಕುಮಾರ ಕಲ್ಕೂರ ಇವರು ಕನ್ನಡ ಧ್ವಜ ನೀಡುವ ಮೂಲಕ ಘಟಕಕ್ಕೆ ಚಾಲನೆ ನೀಡಲಿದ್ದು, ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ಗಣೇಶ ಕಾರ್ಣಿಕ್ ಮತ್ತು ಡಾ. ಶಿವಾನಂದ ಬೇಕಲ್ ಇವರಿಗೆ ‘ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ-2025’ ಪ್ರದಾನ ಮಾಡಲಾಗುವುದು.
ಯೋಗೀಶ್ ಕುಮಾರ ಜೆಪ್ಪು, ಜೆ.ಕೆ. ರಾವ್ ಮಂಗಳೂರು, ನಾಡೋಜ ಡಾ. ಕೃಷ್ಣಪ್ರಸಾದ ಕೂಡ್ಲು, ಡಾ. ಉದಯ ಕುಮಾರ ಕೆ., ಡಾ. ಮಂಜುಳಾ ಅನಿಲ್ ರಾವ್, ಡಾ. ಕೆ.ವಿ. ದೇವಪ್ಪ ಮಂಗಳೂರು ಇವರಿಗೆ ‘ಸಮಾಜ ಸೇವಾರತ್ನ ಪ್ರಶಸ್ತಿ -2025’ ಪ್ರದಾನ ಮಾಡಲಾಗುವುದು. ಕಾಸರಗೋಡಿನ ಕನ್ನಡ ಭವನ ಪ್ರಕಾಶನದ 8ನೇ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ರೇಖಾ ಸುದೇಶ್ ರಾವ್ ಇವರ ‘ಶರಧಿಯಾಚೆ ಪ್ರಪ್ರಥಮ ಹೆಜ್ಜೆ’ ಹಾಗೂ ಮಾನ್ಯ ನುಳ್ಳಿಪ್ಪಾಡಿ ರಚಿಸಿದ ‘ಏನ್ ಆರ್ಟ್ ಅಫ್ ಪೊಯೆಟ್ರಿ’ ಕೃತಿಗಳು ಬಿಡುಗಡೆಯಾಗಲಿದೆ. ಇದೇ ಸಂದರ್ಭದಲ್ಲಿ ‘ಕನ್ನಡ ಪಯಸ್ವಿನಿ ಪ್ರಶಸ್ತಿ -2025’ ಪ್ರದಾನ ಮಾಡಲಾಗುವುದು. ಡಾ. ವಾಣಿಶ್ರೀ ಕಾಸರಗೋಡು ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಪ್ರಸ್ತುತ ಪಡಿಸುವ ನೃತ್ಯ ಗಾನ ವೈಭವ ಪ್ರಶಸ್ತುಗೊಳ್ಳಲಿದೆ.