ಬ್ರಹ್ಮಾವರ : ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ಹದಿನೆಂಟು ವರ್ಷಗಳಿಂದ ಕಿಶೋರ ಯಕ್ಷಗಾನ ಸಂಭ್ರಮ ನಡೆಸಿಕೊಂಡು ಬಂದಿದ್ದು, ಈ ವರ್ಷ 94 ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನಡೆಸುತ್ತಿದ್ದು, ಪ್ರದರ್ಶನಗಳ ಉದ್ಘಾಟನೆಯು ದಿನಾಂಕ 25 ನವೆಂಬರ್ 2025ರಂದು ಬ್ರಹ್ಮಾವರದ ಬಂಟರ ಸಂಘದ ಆವರಣದಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಜರಗಿತು.
ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರು ಜ್ಯೋತಿ ಬೆಳಗಿಸಿ “ಯಕ್ಷಗಾನ ಶ್ರೀಮಂತ ಕಲಾಪ್ರಕಾರ. ಮಕ್ಕಳಲ್ಲಿ ಭಾಷಾ ಪ್ರೌಢಿಮೆ, ಪುರಾಣ ಜ್ಞಾನ, ಆತ್ಮವಿಶ್ವಾಸ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಇಂತಹ ಕಾರ್ಯಕ್ರಮವನ್ನು ನಿರಂತರ ನಡೆಸಿಕೊಂಡು ಬಂದ ಟ್ರಸ್ಟ್ ಮತ್ತು ಉಡುಪಿಯ ಯಕ್ಷಗಾನ ಕಲಾರಂಗ ಅಭಿನಂದನಾರ್ಹ ಸಂಘಟನೆ” ಎಂದರು. ಆರೂರು ತಿಮ್ಮಪ್ಪ ಶೆಟ್ಟರು “ಯಕ್ಷಗಾನ ಕಲೆ ಬದುಕಿಗೆ ಸಂಸ್ಕಾರ ನೀಡುತ್ತದೆ” ಎಂದು ಅಭಿಪ್ರಾಯಪಟ್ಟರು. ಉಡುಪಿ ಶಾಸಕರೂ, ಟ್ರಸ್ಟ್ ಅಧ್ಯಕ್ಷರೂ ಆದ ಯಶಪಾಲ್ ಎ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಬಿ. ಭುಜಂಗ ಶೆಟ್ಟಿ, ಆರೂರು ತಿಮ್ಮಪ್ಪ ಹೆಗ್ಡೆ, ದಿನಕರ ಹೇರೂರು, ಟಿ. ಭಾಸ್ಕರ್ ರೈ, ಮೖರ್ಮಾಡಿ ಅಶೋಕ್ ಕುಮಾರ್ ಶೆಟ್ಟಿ, ಬಿರ್ತಿ ರಾಜೇಶ ಶೆಟ್ಟಿ, ಎಂ. ಗಂಗಾಧರ ರಾವ್, ರಾಜು ಕುಲಾಲ್, ಮಾರಾಳಿ ಪ್ರತಾಪ ಹೆಗ್ಡೆ, ಬಿ.ಆರ್. ನಿತ್ಯಾನಂದ, ನಾರಾಯಣ ಎಂ. ಹೆಗಡೆ ಉಪಸ್ಥಿತರಿದ್ದರು. ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳನ್ನಾಡಿದರು. ಪ್ರದರ್ಶನ ಸಂಘಟನಾ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಉದಯ ಪೂಜಾರಿ ವಂದಿಸಿ, ಟ್ರಸ್ಟಿನ ಕೋಶಾಧಿಕಾರಿ ಗಣೇಶ ಬ್ರಹ್ಮಾವರ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನ ಸಮಾರಂಭದ ಅನಂತರ ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ನರಸಿಂಹ ತುಂಗ ನಿರ್ದೇಶನದಲ್ಲಿ ‘ವೀರ ವೃಷಸೇನ’ ಯಕ್ಷಗಾನ ಪ್ರದರ್ಶನಗೊಂಡಿತು.

