ಪುತ್ತೂರು : ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ಇದರ ಸದಸ್ಯೆ ಶ್ರದ್ಧಾ ಮತ್ತು ಶ್ರಾವ್ಯ ಇವರು ಶಿಶಿಲದಲ್ಲಿ ಆರಂಭಿಸಿದ ‘ನೃತ್ಯಭೂಷಿಣಿ’ ಕಲಾ ಶಾಲೆಯನ್ನು ಕಲಾ ಅಕಾಡೆಮಿ ಸಂಸ್ಥಾಪಕಿ, ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಇವರು ದಿನಾಂಕ 09 ಅಕ್ಟೋಬರ್ 2024ರಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿದುಷಿ ಶಾಲಿನಿ ಆತ್ಮಭೂಷಣ್ “ನನ್ನ ಶಿಷ್ಯೆಯರಾದ ಶ್ರದ್ದಾ ಮತ್ತು ಶ್ರಾವ್ಯ ಇವರು ಈಗ ನೃತ್ಯ ಶಿಕ್ಷಕಿಯರಾಗಿ ಶಾಸ್ತ್ರೀಯ ನೃತ್ಯ ಪಸರಿಸಲು ಮುಂದಾಗಿರುವುದು ಶ್ಲಾಘನೀಯ. ಇಂದಿನ ಜನಮಾನಸದಲ್ಲಿ ಕಲೆ, ಸಂಸ್ಕೃತಿಯ ಉಳಿವಿಗೆ ಇಂತಹ ಪ್ರಯತ್ನಗಳು ಮನನೀಯ” ಎಂದು ಹಾರೈಸಿದರು.
ಈ ಸಂದರ್ಭ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಇವರನ್ನು ಸಹೋದರಿಯರಾದ ಶ್ರದ್ಧಾ ಮತ್ತು ಶ್ರೇಯ ಸನ್ಮಾನಿಸಿ, ಗೌರವಿಸಿ ಆಶೀರ್ವಾದ ಪಡೆದುಕೊಂಡರು. ಶಿಶಿಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಧಿನ್, ಇಳಂತಿಲ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಚಂದ್ರಿಕಾ ಭಟ್, ಶಾಲಾ ಮುಖ್ಯಗುರು ರತ್ನಾ ಬಿ., ಅರ್ಚಕ ಯೋಗೀಶ್ ದಾಮ್ಲೆ, ಶಾಲಾ ಗುರುಗಳಾದ ಕುಂಞ ಮಿತ್ತಿಲ ಮತ್ತಿತರರಿದ್ದರು. ಶಿಶಿಲ ಸಂಜೀವಿನಿ ಒಕ್ಕೂಟದ ಗಿರಿಜಾ ಕೆದಿಲಾಯ ಅಧ್ಯಕ್ಷತೆ ವಹಿಸಿದ್ದರು. ಹಂಸಾನಂದಿನಿ ಪ್ರಾರ್ಥಿಸಿ, ತೇಜಸ್ವಿರಾಜ್ ವಂದಿಸಿ, ಶ್ರಾವ್ಯ ಸ್ವಾಗತಿಸಿ, ನಿರೂಪಿಸಿದರು.