ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಶಾಖೆ ಇದರ ವತಿಯಿಂದ ಮಂಗಳೂರಿನ ಕ್ಯಾಥೋಲಿಕ್ ಹೌಸ್ ಇದರ ಛಾಯಾಚಿತ್ರ ದಾಖಲೆಯ ‘ಆಲ್ಬಮ್ ಆಫ್ ದಿ ಪೋರ್ಚಸ್’ ಪ್ರದರ್ಶನದ ಉದ್ಘಾಟನೆಯನ್ನು ದಿನಾಂಕ 04 ಅಕ್ಟೋಬರ್ 2025ರಂದು ಸಂಜೆ 5-30 ಗಂಟೆಗೆ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಿ.ಎ.ಎಸ್.ಕೆ. ಮಂಗಳೂರು ಇದರ ಅಧ್ಯಕ್ಷರಾದ ರೊನಾಲ್ಡ್ ಗೋಮ್ಸ್ ಇವರ ಉಪಸ್ಥಿತಿಯಲ್ಲಿ ಈ ಪ್ರದರ್ಶನ ನಡೆಯಲಿದ್ದು, ದಿನಾಂಕ 11 26 ಅಕ್ಟೋಬರ್ 2025ರ ತನಕ ಬೆಳಗ್ಗೆ 11-00 ಗಂಟೆಯಿಂದ ಸಂಜೆ 7-00 ಗಂಟೆ ತನಕ ಪ್ರದರ್ಶನವು ತೆರೆದಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸುಭಾಸ್ ಬಸು 87623 68048 ಮತ್ತು ಶರ್ವಾಣಿ ಭಟ್ 88677 05207 ಇವರನ್ನು ಸಂಪರ್ಕಿಸಿರಿ.