ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯು ಪುತ್ತೂರಿನಲ್ಲಿ ಪ್ರಾರಂಭವಾಗಿ ಮೂವತ್ತು ವರ್ಷಗಳು ಆಗುತ್ತಿರುವ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳು ಯೋಜಿತಗೊಂಡವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ‘ಮೂಕಾಂಬಿಕಾ ಮೂವತ್ತರ ಮಾರ್ದನಿ’ ಎಂಬ ಶೀರ್ಷಿಕೆಯೊಂದಿಗೆ ಪ್ರಸ್ತುತಗೊಳ್ಳಲಿರುವುದು. ದಿನಾಂಕ 22 ಜೂನ್ 2025ರಂದು ಪ್ರಾರಂಭದ ಉದ್ಘಾಟನಾ ಕಾರ್ಯಕ್ರಮವಾಗಿ ನೃತ್ಯಾಂತರಂಗ 130ನೇ ಸರಣಿ ಆಯೋಜಿಸಿ ಸಂಸ್ಥೆಯ ನಿರ್ದೇಶಕರು ವಿದ್ವಾನ್ ದೀಪಕ್ ಕುಮಾರ್ ಮತ್ತು ಅವರ ಪತ್ನಿ ವಿದುಷಿ ಪ್ರೀತಿಕಲಾರವರು ಮಹಾಲಿಂಗೇಶ್ವರ ದೇವರ ಕುರಿತಾದ ವಿದುಷಿ ಸುಮಂಗಲಾ ರತ್ನಾಕರ ಮಂಗಳೂರು ಇವರು ಬರೆದ ಪದವರ್ಣವನ್ನು ಪ್ರಸ್ತುತಪಡಿಸಿದರು. ವಿದ್ವಾಂಸರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ಮತ್ತು ಅವರ ಪತ್ನಿ ಶ್ರೀಮತಿ ಸುಧಾ ಎಸ್. ಭಟ್ ಕಶೆಕೋಡಿ ಇವರು ಅಭ್ಯಾಗತರಾಗಿ ಶುಭ ಹಾರೈಸಿದರು. ಕುಮಾರಿ ಮಂದಿರ ಕಜೆ ನಿರೂಪಣೆ ಮಾಡಿ, ಕುಮಾರಿ ಮಾತಂಗಿ ಪ್ರಾರ್ಥನೆ, ಕುಮಾರಿ ಲಾಸ್ಯ ಸಂತೋಷ್ ಪರಿಚಯ ಮತ್ತು ವವಿದುಷಿ ಅಕ್ಷತಾ ಕೆ. ವಿಷಯ ಮಂಡನೆ ಮಾಡಿದರು.