ಕುತ್ತಾರು ಪದವು : 76ನೇ ವರ್ಷದ ಸ್ವಾತಂತ್ರ್ಯೋತ್ಸವದ ಆಚರಣೆಯ ಪ್ರಯುಕ್ತ ಯಕ್ಷನಂದನ ಪಿ.ವಿ. ಐತಾಳರ ಇಂಗ್ಲಿಷ್ ಯಕ್ಷಗಾನ ಬಳಗ ಮತ್ತು ರೋಟರಿ ಕ್ಲಬ್ ಪೋರ್ಟ್ ಟೌನ್ ಪಣಂಬೂರು ಇದರ ವತಿಯಿಂದ ಕುತ್ತಾರು ಪದವಿನ ಬಾಲ ಸಂರಕ್ಷಣಾ ಕೇಂದ್ರದಲ್ಲಿ ಮಕ್ಕಳ ಜತೆಗೂಡಿ ನಡೆಸುವ ಸಾಂಸ್ಕೃತಿಕ, ನಲಿವು ಸಂಭ್ರಮ ಕಾರ್ಯಕ್ರಮ ದಿನಾಂಕ 15-08-2023ರಂದು ನಡೆಯಿತು.
ಬಾಲ ಸಂರಕ್ಷಣ ಕೇಂದ್ರ ಕುತ್ತಾರು ಪದವು ಇದರ ಸಂಚಾಲಕರಾದ ಶ್ರೀ ಪಿ. ಅನಂತ ಕೃಷ್ಣ ಭಟ್ ಅವರು “ಯಕ್ಷನಂದನ ಜತೆಯಾಗಿ ಮಾಡಿದ ಕಾರ್ಯಕ್ರಮ ಮಕ್ಕಳಿಗೆ ಆನಂದ ಜತೆಗೆ ಬಾಲ್ಯದಲ್ಲಿನ ಸಂಭ್ರಮದ ಆಚರಣೆಯಾಗಿದೆ. ಪ್ರತೀ ವರ್ಷ ಮಾಡುತ್ತಿರುವ ಈ ಸೇವೆ ಶ್ಲಾಘನೀಯ” ಎಂದರು.
ರೋಟರಿ ಪೋರ್ಟ್ ಟೌನ್ ಅಧ್ಯಕ್ಷರಾದ ಕೋಮಲ ರಾಮನ್, ಯಕ್ಷನಂದನದ ಸದಸ್ಯೆ ಸೌಜನ್ಯ ಶ್ರೀಕುಮಾರ್ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಯಕ್ಷನಂದನದ ಅಧ್ಯಕ್ಷ ಡಾ. ಪಿ. ಸತ್ಯಮೂರ್ತಿ ಐತಾಳ, ವಾಣಿ ಎಸ್. ಐತಾಳ, ಶ್ಯಾಮಲಾ ಎಸ್. ಐತಾಳ, ರೋಟರಿ ಪಣಂಬೂರಿನ ಪಿ. ರಾಜೇಂದ್ರ ಬಸವರಾಜ್, ನವೀನ್ ಕುಮಾರ್, ನವೀನ್ ಬರ್ಕೆ, ರಾಮನ್, ಪರಿಮಳ ಕೊಡ್ಡಿ, ಪುಷ್ಪಾ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
ಸುಮಾರು ಮೂರೂವರೆ ಘಂಟೆಗಳ ಕಾಲ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ವಿನೋದಾವಳಿಗಳು ನಡೆದವು. ಮಕ್ಕಳಿಗೆ ಭಾರತದ ಸಂವಿಧಾನ ಕುರಿತ ಮಾಹಿತಿ ನೀಡಲಾಯಿತು. ಯಕ್ಷನಂದನದ ಸಂಚಾಲಕ ಪಿ. ಸಂತೋಷ್ ಐತಾಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.