ಉಡುಪಿ : ಭಾವನಾ ಫೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜಿಸುತ್ತಿರುವ ಜನಪದ ಕಲೆಗಳ ಸರಣಿಯ ಹದಿನಾರು ಮತ್ತು ಹದಿನೇಳನೆಯ ಕಾರ್ಯಕ್ರಮದಲ್ಲಿ ‘ಸಂಝಿ ಕಲೆ’ಯ ಕಾರ್ಯಾಗಾರವನ್ನು ದಿನಾಂಕ 25 ಮತ್ತು 26 ಜನವರಿ 2025ರಂದು ಉಡುಪಿಯ ಬಡಗುಪೇಟೆಯಲ್ಲಿ ಆಯೋಜಿಸಲಾಗುತ್ತಿದೆ.
ದಿನಾಂಕ 25 ಜನವರಿ 2025ರಂದು ‘ಸಂಝಿ’ ಮತ್ತು ದಿನಾಂಕ 26 ಜನವರಿ 2025ರಂದು ‘ಜಲ್ ಸಂಝಿ’ ಕಲೆಯ ಬಗ್ಗೆ ಬೆಳಗ್ಗೆ 9-30 ಗಂಟೆಯಿಂದ ಸಂಜೆ 4-00 ಗಂಟೆ ತನಕ ನಡೆಯಲಿದ್ದು, ರಾಷ್ಟ್ರೀಯ ಪ್ರಶಸ್ತಿ ವಿಜೇತ ಶ್ರೀ ರಾಮ್ ಸೋನಿ ಇವರು ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.