ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (INTAC) ಇದರ ವತಿಯಿಂದ ಕಾರ್ಯಕ್ರಮವನ್ನು ದಿನಾಂಕ 19 ನವೆಂಬರ್ 2024ರಿಂದ 25 ನವೆಂಬರ್ 2024 ರವರೆಗೆ ಪ್ರತಿ ದಿನ ಸಂಜೆ 5-30 ಗಂಟೆಗೆ ಮಂಗಳೂರಿನ ಬಲ್ಲಾಳ್ ಭಾಗ್, ಜಿ. ಜಿ. ರೋಡ್, ಕೊಡಿಯಾಲ್ ಗುತ್ತು (ಪಶ್ಚಿಮ), ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 19 ನವೆಂಬರ್ 2024ರಂದು ಹರಿದಾಸ ಶೇಣಿ ಮುರಳಿ ಇವರಿಂದ ‘ವಾಲಿ ಸುಗ್ರೀವರ ಕಾಳಗ’ ಹರಿಕಥೆ ನಡೆಯಲಿದ್ದು, ಇವರಿಗೆ ಶ್ರೀಪತಿ ಭಟ್ ಬೆಳ್ಳೇರಿ ಹಾರ್ಮೋನಿಯಂನಲ್ಲಿ ಮತ್ತು ಕೌಶಿಕ್ ಮಂಜನಾಡಿ ತಬಲಾದಲ್ಲಿ ಸಹಕರಿಸಲಿದ್ದಾರೆ. ದಿನಾಂಕ 20 ನವೆಂಬರ್ 2024ರಂದು “ಮೌಖಿಕ ಮಹಾಕಾವ್ಯಗಳ ತಯಾರಿಕೆಯಲ್ಲಿ ಸ್ಥಳೀಯ ಜ್ಞಾನದ ಪಾತ್ರ” ಎಂಬ ವಿಷಯದಲ್ಲಿ ಡಾ. ಕೆ. ಚಿನ್ನಪ್ಪ ಗೌಡ ಉಪನ್ಯಾಸ ನೀಡಲಿದ್ದಾರೆ. ದಿನಾಂಕ 21 ನವೆಂಬರ್ 2024ರಂದು ಯು. ಶ್ರೀನಿವಾಸ್ ಮಲ್ಯ ಇವರ “ಮಲ್ಯ ನಿವಾಸದ ಪ್ರದರ್ಶನದೊಂದಿಗೆ ಯು. ಶ್ರೀನಿವಾಸ್ ಮಲ್ಯ ಇವರ ಜನ್ಮ ವಾರ್ಷಿಕೋತ್ಸವದ ಆಚರಣೆ”ನಡೆಯಲಿದೆ. ದಿನಾಂಕ 22 ನವೆಂಬರ್ 2024ರಂದು ಡಾ. ಜನಾರ್ದನ ರಾವ್ ಹವಾಂಜೆ ಇವರಿಂದ “ಕಾವಿ ಕಲಾ ಪರಂಪರೆ – ಕಲೆ, ಗುರುತು ಮತ್ತು ಪರಂಪರೆ” ವಿಷಯದಲ್ಲಿ ಉಪನ್ಯಾಸ ನಡೆಯಲಿದ್ದು, ದಿನಾಂಕ 23 ನವೆಂಬರ್ 2024ರಂದು ನಿವೃತ್ತ ಪ್ರಾಧ್ಯಾಪಕ ಮತ್ತು ಪರಿಸರವಾದಿಗಳಾದ ಡಾ. ನರೇಂದ್ರ ರೈ ದೇರ್ಲ ಇವರಿಂದ ‘ಒಂದು ಬೊಗಸೆ ಹಸಿರು’ ವಿಷಯದಲ್ಲಿ ಉಪನ್ಯಾಸ ನಡೆಯಲಿದೆ. ದಿನಾಂಕ 24 ನವೆಂಬರ್ 2024ರಂದು ಕದಿಕೆ ಟ್ರಸ್ಟ್ ಇದರ ಸಂಸ್ಥಾಪಕರಾದ ಮಮತಾ ರೈ ಇವರಿಂದ ‘ಸಾಂಪ್ರದಾಯಿಕ ನೇಯ್ಗೆ ಪುನರುಜ್ಜೀವನ – ಉಡುಪಿ ಸೀರೆ’ ವಿಷಯದಲ್ಲಿ ಉಪನ್ಯಾಸ ನಡೆಯಲಿದ್ದು, ದಿನಾಂಕ 25 ನವೆಂಬರ್ 2024ರಂದು ಇಂಟಾಕ್ ಮಂಗಳೂರು ಇವರಿಂದ ‘ಮಂಗಳೂರಿನ ಕಟ್ಟೆಗಳು’ ವಿಷಯದಲ್ಲಿ ಉಪನ್ಯಾಸ ಹಾಗೂ ಕಟ್ಟೆಗಳು ಪ್ರದರ್ಶನ ನಡೆಯಲಿದೆ.
Subscribe to Updates
Get the latest creative news from FooBar about art, design and business.
Related Posts
Comments are closed.