ಮಂಗಳೂರು : ಒಡಿಯೂರು ಶ್ರೀಗಳ ಜನ್ಮ ದಿನೋತ್ಸವ ಸಮಿತಿ ವತಿಯಿಂದ ಶ್ರೀಗಳವರ ಜನ್ಮದಿನೋತ್ಸವ – ಶ್ರೀ ಒಡಿಯೂರು ಗ್ರಾಮೋತ್ಸವ 2025 ಅಂಗವಾಗಿ ದಿನಾಂಕ 06 ಮತ್ತು 07 ಆಗಸ್ಟ್ 2025ರಂದು ಒಡಿಯೂರು ಸಂಸ್ಥಾನದ ರಾಜಾಂಗಣದಲ್ಲಿ ‘ವರ್ತಮಾನದ ತಲ್ಲಣಗಳು’ ಎಂಬ ವಿಷಯದಲ್ಲಿ ಅಂತರ್ ಕಾಲೇಜು ವಿದ್ಯಾರ್ಥಿಗಳ ಕಿರು ನಾಟಕ ಸ್ಪರ್ಧೆ ಆಯೋಜಿಸಲಾಗಿದೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಪದವಿ ಪೂರ್ವ, ಡಿಪ್ಲೊಮಾ, ವೃತ್ತಿಪರ ಕೋರ್ಸ್, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು 10 ನಿಮಿಷದ, ಕನ್ನಡ ಅಥವಾ ತುಳು ಭಾಷೆಯ ಈ ಕಿರು ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವಿದ್ಯಾಸಂಸ್ಥೆಯ ಮೂಲಕ ಹೆಸರು ನೋಂದಣಿ ಮಾಡಬೇಕಾಗಿದ್ದು, ಒಂದು ಸಂಸ್ಥೆಯ ಗರಿಷ್ಠ 2 ತಂಡಗಳಿಗೆ ಭಾಗವಹಿಸಲು ಅವಕಾಶವಿದೆ. ಸ್ಪರ್ಧೆಗೆ ನೋಂದಣಿ ಮಾಡಲು 08 ಜುಲೈ 2025 ಕೊನೆಯ ದಿನಾಂಕವಾಗಿದ್ದು, ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರೂ.50 ಸಾವಿರ, ದ್ವಿತೀಯ ರೂ.30 ಸಾವಿರ ಹಾಗೂ ತೃತೀಯ ರೂ.20 ಸಾವಿರ ನಗದು ಹಾಗೂ ಟ್ರೋಫಿ, ಪ್ರಸಂಸಾ ಪತ್ರ ನೀಡಲಾಗುವುದು.