ಪುತ್ತೂರು : ಕಾರ್ಗಿಲ್ ವಿಜಯೋತ್ಸವಕ್ಕೆ 25 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಶಾಲಾ ಶಿಕ್ಷಣ ಇಲಾಖೆ ಹಾಗೂ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಜಂಟಿಯಾಗಿ ದಕ್ಷಿಣ ಕನ್ನಡ, ಕೊಡಗು ಹಾಗೂ ಕಾಸರಗೋಡು ಜಿಲ್ಲೆಗಳ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ‘ಭಾಷಣ ಸ್ಪರ್ಧೆ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆ’ಗಳನ್ನು ಆಯೋಜನೆ ಮಾಡಿದ್ದು, ಎರಡೂ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ರೂ.5,000/- ಹಾಗೂ ದ್ವಿತೀಯ ಬಹುಮಾನ ರೂ.3,000/- ನೀಡಲಾಗುತ್ತದೆ.
ಭಾಷಣ ಸ್ಪರ್ಧೆಗೆ ‘ಭಾರತೀಯ ಸೈನ್ಯ-ಸಾಧನೆ ಹಾಗೂ ಸಾಮರ್ಥ್ಯ’ ಎಂಬ ವಿಷಯ ನೀಡಲಾಗಿದೆ. ದೇಶಭಕ್ತಿ ಗೀತೆಗೆ ಕನಿಷ್ಟ ಮೂರು ಜನರ ತಂಡ ಹಾಗೂ ಗರಿಷ್ಟ ಐದು ಜನರ ತಂಡ ಭಾಗವಹಿಸಬಹುದಾಗಿದ್ದು, ಎರಡೂ ಸ್ಪರ್ಧೆಗೆ ತಲಾ ಐದು ನಿಮಿಷಗಳ ಸಮಯಾವಕಾಶ ನೀಡಲಾಗಿದೆ. ಒಂದು ಸಂಸ್ಥೆಯಿಂದ ಎಷ್ಟು ತಂಡಗಳು ಬೇಕಾದರೂ ಭಾಗವಹಿಸುವುದಕ್ಕೆ ಅವಕಾಶವಿದೆ ಹಾಗೂ ಯಾವುದೇ ನೋಂದಾವಣೆ ಶುಲ್ಕ ಇರುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ದಿನಾಂಕ 10-07-2024ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಬಹುದು. ಸ್ಪರ್ಧೆಯು ದಿನಾಂಕ 15-07-2024ರಂದು ನಡೆಯಲಿದೆ. ಮಾಹಿತಿ, ನೋಂದಾವಣೆಗೆ 9901195417, 9741481600, 9449102082 ಸಂಖ್ಯೆಗೆ ಕರೆ ಮಾಡಬಹುದು.