ಮೂಡುಬಿದಿರೆ : ಇಂಟರ್ ನ್ಯಾಶನಲ್ ಸರ್ಕ್ಯೂಟ್ 2025ರ ಅಂತಾರಾಷ್ಟ್ರೀಯ ಸೆಲೂನ್ 3-ಫೋಟೋ ಜರ್ನಲಿಸಂ ವಿಭಾಗದಲ್ಲಿ ಡಿಜಿ ಕ್ಲಬ್ ಗೋಲ್ಡ್ ಪ್ರಶಸ್ತಿಗೆ ಛಾಯಾಗ್ರಾಹಕ ರವಿ ಕೋಟ್ಯಾನ್ ಅವರು ಪಾತ್ರರಾಗಿದ್ದಾರೆ. ಮೂಡುಬಿದಿರೆಯಲ್ಲಿ ಸುಮಾರು 3 ದಶಕಗಳ ಕಾಲ ಫೋಟೋಗ್ರಫಿಯಲ್ಲಿ ಕಾರ್ಯನಿರ್ವಹಿಸಿದ ಮಾನಸ ಡಿಜಿಟಲ್‌ನ ರವಿ ಕೋಟ್ಯಾನ್‌ರಿಗೆ ಈ ಬಾರಿ ಅಂತರ್ ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿಗಳು ಲಭಿಸಿದೆ.
ವೇಣೂರು ಮಸ್ತಕಾಭಿಷೇಕ-2024ರ ಛಾಯಾಚಿತ್ರಕ್ಕಾಗಿ ಕ್ರೆಡೆನ್ಸ್:
ಆಳ್ವಾಸ್ ಸಂಘಟಿಸಿದ ಸ್ಪೀಪಲ್ ಚೇಸ್ ವಾಟರ್ ಜಂಪ್ ಫೋಟೋ ಸಲ್ಲಿಕೆಗಾಗಿ ಕಲ್ಕಿ 2025 (ಡಿಜಿಟಲ್)ರ ಜ್ಯುಪಿಟರ್ ಸೊಸೈಟಿ ಆಫ್ ಫೋಟೋ ಗ್ರಫಿ (ಜೆ. ಎಸ್. ಸಿ. ಇಂಡಿಯಾ) ಮೆಡಲ್, ಡಿಜಿಟಲ್ ವಿಭಾಗದಲ್ಲಿ ಸಲ್ಲಿಸಿದ ಪ್ರಕೃತಿ ಚಿತ್ರಕ್ಕಾಗಿ ಹ್ಯಾಪ್ ಇಂಟರ್ ನ್ಯಾಶನಲ್ ಸ್ಯಾಲೊನ್ 2025. ಎಫ್. ಐ. ಪಿ. ರಿಬ್ಬನ್ ಮನ್ನಣೆ, ಆಳ್ವಾಸ್‌ನಲ್ಲಿ ನಡೆದ ಹರ್ಡಲ್ಸ್‌ನ ಚಿತ್ರ ಸಲ್ಲಿಕೆಗಾಗಿ ಜ್ಯೂರಿ ಚಾಯ್ಸ್-ಕಲ್ಕಿ 2025 ಡಿಜಿಟಲ್‌ನ ಜೆ. ಎಸ್. ಪಿ. ವರ್ಲ್ಡ್ ವೈಡ್ ಗೌರವ ಮನ್ನಣೆ, ಕ್ರಿಯೇಟಿವ್ ಐಸ್ ಇಂಟರ್ ನ್ಯಾಶನಲ್-ಸರ್ಕ್ಯೂಟ್ 2025 ಸ್ಪರ್ಧೆಯ ಫೋಟೋ ಟ್ರಾವೆಲ್ ವಿಭಾಗಕ್ಕೆ ಸಲ್ಲಿಸಿದ ಚಿಕ್ಕಮಗಳೂರು ಉತ್ಸನದ ಮೆರವಣಿಗೆಯಲ್ಲಿ ಕಂಡ ರಾವಣನ ಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಿಜಿ ಕ್ಲಬ್ ಕಂಚಿನ ಪದಕ ಲಭಿಸಿದೆ. ಕಲ್ಕಿ 2025 (ಡಿಜಿಟಲ್) ಸ್ಯಾಲೊನ್ 3ರಲ್ಲಿ-ಫೋಟೊ ಟ್ರಾವೆಲ್ ವಿಭಾಗಕ್ಕೆ ಸಲ್ಲಿಸಿದ ಚಿತ್ರ (ಪುತ್ತಿಗೆ ದೇವಳದ ಜೋಡು ಬಲಿಯ ಛಾಯಾ ಚಿತ್ರ) ಸರ್ಕ್ಯೂಟ್ ಮೆರಿಟ್ ಮನ್ನಣೆಗೆ ಪಾತ್ರವಾಗಿದೆ.