ಉಡುಪಿ : ಉಡುಪಿಯ ಯುವ ಛಾಯಾಚಿತ್ರ ಕಲಾವಿದ, ನಿದೀಶ್ ಕುಮಾರ್ ಇವರಿಗೆ ಅಂತಾರಾಷ್ಟ್ರೀಯಮಟ್ಟದ ಗೋಲ್ಡ್ ಮೆಡಲ್ ಪ್ರಾಪ್ತವಾಗಿದೆ. ಬಾಂಗ್ಲಾ ದೇಶದ ಚಿತ್ರಚಿಂತಾ ಫೋಟೋಗ್ರಾಫರ್ಸ್ ಸರ್ಕಲ್ ಆಯೋಜಿಸಿದ್ದ ‘ಮೂಡ್ಆಫ್ ಮಾನ್ ಸೂನ್’ ವಿಭಾಗದಲ್ಲಿ ಇವರ ಛಾಯಾಚಿತ್ರ ಪತಾಶಸ್ತಿಗಳಿಸಿದೆ.
ಉಡುಪಿಯ ಪರ್ಕಳದಲ್ಲಿ ಶ್ರೀನಿಧಿ ಸ್ಟುಡಿಯೋ ಸ್ಥಾಪಿಸಿ, ಕಳೆದ 23 ವರ್ಷಗಳಿಂದ ಛಾಯಾಚಿತ್ರ ಕಲಾವಿದರಾಗಿ ದುಡಿಯುತ್ತಿದ್ದಾರೆ. ಇದು ಇವರಿಗೆ ಸಂದ 49ನೇ ಪ್ರಶಸ್ತಿಯಾಗಿದೆ.