ಬೆಳಗಾವಿ : ಶ್ರೀ ಲಾಲಸಾಬ ಎಚ್. ಪೆಂಡಾರಿ ಸಾರಥ್ಯದ ಕವಿತ್ತ ಕರ್ಮಮಣಿ ಫೌಂಡೇಶನ್ (ರಿ.) ನಾಗರಮುನ್ನೋಳಿ ಇದರ ವತಿಯಿಂದ ದಿನಾಂಕ 27 ಜುಲೈ 2025ರಂದು ಮಂಗಳೂರಿನ ಕಣಚೂರು ಆಸ್ಪತ್ರೆ ಹಾಗೂ ಮಂಗಳಾ ಆಸ್ಪತ್ರೆಯ ವೈದ್ಯ ಮೂಲವ್ಯಾಧಿ ಚರ್ಮರೋಗಗಳ ವಿಶೇಷ ಚಿಕಿತ್ಸಕ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿ ಇವರಿಗೆ ಅಂತಾರಾಷ್ಟ್ರೀಯ ಮಟ್ಟದ ‘ಕವಿ ಕುಲಪತಿ ಪ್ರಶಸ್ತಿ’ಯನ್ನು ನೀಡಿ ಸನ್ಮಾನ ಮಾಡಲಾಯಿತು.
ಕನ್ನಡ ನಾಡು-ನುಡಿ, ನೆಲ-ಜಲ, ಸಂಸ್ಕೃತಿ ಈ ಮೊದಲಾದ ಕ್ಷೇತ್ರಗಳಲ್ಲಿ ಅನವರತವಾಗಿ ಶ್ರಮಿಸುತ್ತಿರುವ ತಮ್ಮ ಸೇವೆ ಗಣನೀಯ ಸೇವೆ ಹಾಗೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಪ್ರತಿಭೆ ಮತ್ತು ಸಾಧನೆಯನ್ನು ಗುರುತಿಸಿ ಈ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡುವುದಾಗಿ ಸಂಘಟಕರು ತಿಳಿಸಿರುತ್ತಾರೆ. ಜಿಲ್ಲಾಧ್ಯಕ್ಷ ಶ್ರೀ ಮಂಜುನಾಥ ಗಣಪತಿ ಹೆಗಡೆ, ಸರ್ವಾಧ್ಯಕ್ಷ ಡಾ ಗೋವಿಂದರಾಯ ಎಂ. ಮತ್ತು ಶ್ರೀಮತಿ ರೂಪ ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.