ಯಕ್ಷಗಾನ ರಂಗದಲ್ಲಿ ಬಹುಮುಖ ಪ್ರತಿಭೆಯ ಅನೇಕ ಕಲಾವಿದರು ನಮಗೆ ಕಾಣಸಿಗುತ್ತಾರೆ. ಆದರೆ ಸಾಹಿತ್ಯ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು, ಯಕ್ಷಗಾನ ರಂಗದಲ್ಲಿ ಬೆಳೆಯುತ್ತಿರುವವರು ಕೇವಲ ಕೆಲವೇ ಮಂದಿ ಮಾತ್ರ. ಅತೀ ಚಿಕ್ಕ ವಯಸ್ಸಿನಲ್ಲಿಯೇ ಸಾಹಿತ್ಯ ಕ್ಷೇತ್ರದಲ್ಲಿ ತನ್ನನ್ನು ಗುರುತಿಸಿಕೊಂಡು ಯಕ್ಷಗಾನ ರಂಗದ ಭಾಗವತಿಕೆಯಲ್ಲಿಯೂ ಕೂಡ ಅಷ್ಟೇ ಯಶಸ್ಸನ್ನು ಪಡೆದವರು ಸೃಜನ್ ಗಣೇಶ್ ಹೆಗಡೆ ಗುಂಡೂಮನೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾರುತಿಪುರ ಸಮೀಪದ ಗುಬ್ಬಿಗ ಗ್ರಾಮದಲ್ಲಿ ಶ್ರೀಧರ್ ಹೆಗಡೆ ಗುಂಡೂಮನೆ ಮತ್ತು ಜಯಲಕ್ಷ್ಮಿ ಹೆಗಡೆ ಇವರ ಮಗನಾಗಿ 26.09.1997ರಂದು ಜನನ. ಎಂ.ಎ(ಕನ್ನಡ) ಸ್ಪೆಷಲ್ ಎಜ್ಯುಕೇಶನ್ ಇನ್ ಕಂಪೇರಿಟಿವ್ ಸ್ಟಡೀಸ್ ಇವರ ವಿದ್ಯಾಭ್ಯಾಸ. ಯಕ್ಷಗಾನದ ಮೇಲೆ ಇದ್ದ ಪ್ರೀತಿ ಯಕ್ಷಗಾನಕ್ಕೆ ಬರಲು ಪ್ರೇರಣೆ. ಭಾಸ್ಕರ್ ನೀರೇರಿ ಮತ್ತು ಕೆ.ಪಿ.ಹೆಗಡೆ ಇವರ ಯಕ್ಷಗಾನ ಗುರುಗಳು.
ಹಿಂದಿನ ಭಾಗವತರಿಂದ ಇಂದಿನ ತಲೆಮಾರಿನ ಭಾಗವತರ ತನಕವೂ ಅನೇಕ ಭಾಗವತರ ಭಾಗವತಿಕೆಯನ್ನು ಇಷ್ಟಪಟ್ಟು ಅನೇಕ ಶೈಲಿಯನ್ನು ತಾವೂ ಸ್ವತಃ ರೂಢಿಸಿಕೊಂಡಿದ್ದಾರೆ.
ಕಲ್ಯಾಣಿ, ಭೀಮ್ ಪಲಾಸ್, ಹಿಂದೋಳ ಇತ್ಯಾದಿ ನೆಚ್ಚಿನ ರಾಗಗಳು.
ಕ್ಲಿಷ್ಟ ಪದ್ಯ ಬಂಧದಿಂದ ಕೂಡಿದ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಳು. ರಂಗದಲ್ಲಿರುವ ಎಲ್ಲಾ ಚಂಡೆ ಹಾಗೂ ಮದ್ದಳೆ ವಾದಕರು ನೆಚ್ಚಿನವರು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಬಹಳ ಹೊಸತನಕ್ಕೆ ಇಳಿದದ್ದಿದೆ. ಪ್ರಯೋಗಗಳು ಯಕ್ಷಗಾನೀಯವಾಗಿಯೆ ಜನರಿಗೆ ತಲುಪಬೇಕಾದ ಆವಶ್ಯಕತೆಯಿದೆ.
ಬಹಳ ಹೊಸತನಕ್ಕೆ ಇಳಿದದ್ದಿದೆ. ಪ್ರಯೋಗಗಳು ಯಕ್ಷಗಾನೀಯವಾಗಿಯೆ ಜನರಿಗೆ ತಲುಪಬೇಕಾದ ಆವಶ್ಯಕತೆಯಿದೆ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಇತ್ತೀಚೆಗೆ ಕಲಾಭಿಮಾನಿಗಳಿಗಿಂತಲೂ ಕಲಾವಿದರ ಅಭಿಮಾನಿಗಳು ಹೆಚ್ಚಿದ್ದಾರೆ. ಹಾಗಿದ್ದರೂ ಇನ್ನೊಂದು ಕಲಾವಿದನನ್ನು ಕೀಳಾಗಿ ನೋಡುವ ಮನೋಭಾವ ಸಲ್ಲದು. ಬಹುಶಃ ಈಚೆಗೆ ಯಕ್ಷಗಾನ ಕಲೆಯನ್ನೂ ಒಂದು ರೀತಿ ಸ್ಪರ್ಧೆಯ ಹಾಗೆ ನೋಡುವ ಪ್ರೇಕ್ಷಕರೂ ಇದ್ದಾರೆ. ಯಕ್ಷಗಾನ ಎಂಬುದು ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ನಡೆಯುವ ಪ್ರತಿಭಾಕಾರಂಜಿ ಅಲ್ಲವೆಂಬ ಅರಿವು ಬೇಕು.
ಇತ್ತೀಚೆಗೆ ಕಲಾಭಿಮಾನಿಗಳಿಗಿಂತಲೂ ಕಲಾವಿದರ ಅಭಿಮಾನಿಗಳು ಹೆಚ್ಚಿದ್ದಾರೆ. ಹಾಗಿದ್ದರೂ ಇನ್ನೊಂದು ಕಲಾವಿದನನ್ನು ಕೀಳಾಗಿ ನೋಡುವ ಮನೋಭಾವ ಸಲ್ಲದು. ಬಹುಶಃ ಈಚೆಗೆ ಯಕ್ಷಗಾನ ಕಲೆಯನ್ನೂ ಒಂದು ರೀತಿ ಸ್ಪರ್ಧೆಯ ಹಾಗೆ ನೋಡುವ ಪ್ರೇಕ್ಷಕರೂ ಇದ್ದಾರೆ. ಯಕ್ಷಗಾನ ಎಂಬುದು ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ನಡೆಯುವ ಪ್ರತಿಭಾಕಾರಂಜಿ ಅಲ್ಲವೆಂಬ ಅರಿವು ಬೇಕು.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:- ಯಕ್ಷಗಾನದ ಅಸ್ತಿತ್ವದ ಉಳಿವಿನಲ್ಲಿ ನಮ್ಮತನವನ್ನು ಕಾಪಿಡುವಷ್ಟು ಸಾಧನೆಯಾಗಬೇಕೆಂಬ ಮನಸ್ಸಿದೆ.
ಉಪನ್ಯಾಸ, ಬರಹ, ಓದುವಿಕೆ, ಸಂಗೀತ ಮತ್ತು ಸಾಹಿತ್ಯ ಇವರ ಹವ್ಯಾಸಗಳು.
ಹವ್ಯಾಸಿ ಭಾಗವತನಾಗಿ ಶ್ರೀರಾಮಾರ್ಪಣ ಕಲಾ ವೇದಿಕೆ, ವಂಶವಾಹಿನಿ ಯಕ್ಷಮೇಳ ಮುಂತಾದ ಕಡೆಗಳಲ್ಲಿ ಭಾಗವತಿಕೆ. ಬೊಮ್ಮನಹಳ್ಳಿ ಮೇಳದಲ್ಲಿ ಒಂದು ವರ್ಷ ಪ್ರಧಾನ ಭಾಗವತನಾಗಿ ಸೇವೆ. ಉಳಿದಂತೆ ನೀಲಾವರ, ಸಿಗಂದೂರು, ಮೇಗರವಳ್ಳಿ ಮುಂತಾದ ಮೇಳಗಳಲ್ಲಿ ಅತಿಥಿ ಭಾಗವತನಾಗಿ ಸೇವೆ. ಮುಂದಿನ ತಿರುಗಾಟವನ್ನು ಸಾಲಿಗ್ರಾಮ ಮೇಳದಲ್ಲಿ ಮಾಡುತ್ತಿದ್ದಾರೆ. ಯಕ್ಷಗಾನ ರಂಗದಲ್ಲಿ ಒಟ್ಟು 13 ವರ್ಷಗಳಿಂದ ಸೇವೆಯನ್ನು ಮಾಡುತ್ತಿದ್ದಾರೆ.
ಗೊಂಬೆಯ ಸಂಕಟ, ರಾಧಾಸ್ನೇಹಿ, ಅನಂತ ಸೋಪಾನ(ಕವನ ಸಂಕಲನ), ಆಪ್ತ ಬಂಧನ, ಗೋಜಗಾಮೃತ (ಯಕ್ಷಗಾನ ಪ್ರಸಂಗಗಳು) ಇವರು ಬರೆದ ಕೃತಿಗಳು.
ಅಪ್ಪ ಅಮ್ಮನ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನ ಹಾಗೂ ಆಶೀರ್ವಾದದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಸೃಜನ್ ಗಣೇಶ್ ಹೆಗಡೆ ಗುಂಡೂಮನೆ.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.