ಯಕ್ಷಗಾನ ರಂಗದಲ್ಲಿ ವೃತ್ತಿ ಕಲಾವಿದರು, ಹವ್ಯಾಸೀ ಕಲಾವಿದರು, ಮಹಿಳಾ ಕಲಾವಿದರು ರಂಗವೇರಿ ಮಿಂಚುತ್ತಿದ್ದಾರೆ. ಇಂತಹ ಶ್ರೀಮಂತ ಕಲೆಯಾದ ಯಕ್ಷಗಾನದಲ್ಲಿ ಕಲಾ ಸೇವೆಯನ್ನು ಮಾಡುತ್ತಿರುವ ಕಲಾವಿದೆ CA ವೃಂದಾ ಕೊನ್ನಾರ್.
ಬಿ ಸುಬ್ಬರಾವ್ ಮತ್ತು ವಿದ್ಯಾ ಎಸ್ ರಾವ್ ಇವರ ಮಗಳಾಗಿ ೧೩.೧೦.೧೯೯೭ ರಂದು ಇವರ ಜನನ.
BCom, ACA, DISA(ICAI) ವಿದ್ಯಾಭ್ಯಾಸ. ವೃತ್ತಿಯಲ್ಲಿ ಪ್ರಸ್ತುತ Practicing Chartered Accountant and Teaching faculty. ಶಂಕನಾರಾಯಣ ಮೈರ್ಪಾಡಿ, ಶಿವರಾಮ ಪಣಂಬೂರು, ಪ್ರಸ್ತುತ ರಾಕೇಶ್ ರೈ ಅಡ್ಕ ಇವರ ಯಕ್ಷಗಾನ ಗುರುಗಳು.
ತಂದೆ ಹವ್ಯಾಸಿ ಯಕ್ಷಗಾನ ಕಲಾವಿದರು ಹಾಗೂ ಊರಿನಲ್ಲಿರುವ ಯಕ್ಷಗಾನದ ಪರಿಸರವು ವೃಂದಾ ಅವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಗುರುಗಳು ಮಾರ್ಗದರ್ಶನ ಮಾಡಿದ್ದನ್ನು ಅನುಸರಿಸುತ್ತಾ, ಪದ್ಯಗಳು ಹಾಗೂ ಪ್ರಸಂಗದ ನಡೆಯನ್ನು ಗಮನಿಸಿ ತಿಳಿದುಕೊಂಡು, ತಂದೆಯೊಂದಿಗೆ ಮುಖ್ಯ ವಿಷಯಗಳನ್ನು ಚರ್ಚಿಸಿ, ರಂಗಕ್ಕೇರುವ ಮೊದಲು ಸಾಧ್ಯವಾದಷ್ಟು ಮನೆಯಲ್ಲಿ ಅಭ್ಯಾಸ ಮಾಡಿ, ಕೊಟ್ಟ ವೇಷಕ್ಕೆ (ಯಾವುದೇ – ಇದೇ ವೇಷ ಬೇಕು ಎನ್ನುವ ಮನಸ್ಥಿತಿ ಇರದೆ) ನ್ಯಾಯ ಒದಗಿಸುವ ಪ್ರಯತ್ನ.
ಶ್ರೀದೇವಿ ಮಹಾತ್ಮೆ, ಮಾನಿಷಾದ, ಶಶಿಪ್ರಭಾ ಪರಿಣಯ, ಕೀಚಕ ಸೈರಂದ್ರಿ, ಸುದರ್ಶನ ವಿಜಯ, ಬಪ್ಪನಾಡು ಕ್ಷೇತ್ರ ಮಹಾತ್ಮೆ, ಲಲಿತೋಪಖ್ಯಾನ, ಪಾರಿಜಾತ -ನರಕಾಸುರ ಮೋಕ್ಷ, ಕೃಷ್ಣ ಲೀಲೆ – ಕಂಸ ವಧೆ, ಮೈಂದ ದ್ವಿವಿಧ, ಸುಧನ್ವಾರ್ಜುನ, ಭೀಷ್ಮ ಪರ್ವ, ಚಕ್ರವ್ಯೂಹ ನೆಚ್ಚಿನ ಪ್ರಸಂಗಗಳು.
ಶ್ರೀದೇವಿ, ರಾಮ, ಕೃಷ್ಣ, ವಿಷ್ಣು, ಶಶಿಪ್ರಭೆ, ಸೈರಂದ್ರಿ, ಅರ್ಜುನ, ಸುದೇವ, ಅಕ್ರೂರ, ಮೈಂದ, ಕಿರಾತ, ಭೀಷ್ಮ, ದ್ರೋಣ, ಸತ್ಯಭಾಮೆ ಇತ್ಯಾದಿ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಇಂದಿನ ದಿನಗಳಲ್ಲಿ ಈ ಕಲೆಗೆ ಉತ್ತಮ ಸ್ಪಂದನೆ ದೊರೆಯುತ್ತಿರುವುದು ಸಂತೋಷದ ಸಂಗತಿ. ಆಬಾಲವೃದ್ಧರನ್ನೆಲ್ಲಾ ಆಕರ್ಷಿಸುವ ಗುಣ ಹೊಂದಿದ್ದು, ಪ್ರಪಂಚದಾದ್ಯಂತ ವಿಸ್ತರಿಸಿದೆ. ಕಾಲಕ್ಕೆ ತಕ್ಕಂತೆ ಕಲಾಬದಲಾವಣೆ ಹೊಂದಿ ಉಪ ಪ್ರಕಾರಗಳನ್ನು ಕಾಣಬಹುದು. ಮಹಿಳಾ ಯಕ್ಷಗಾನ ವಿಸ್ತೃತ ರೂಪದಲ್ಲಿ ಸ್ವೀಕರಿಸಲ್ಪಟ್ಟಿದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಬಹಳ ಕಠಿಣ ಪ್ರಶ್ನೆ ಇದು. ಯಾಕೆಂದರೆ ಕಲೆಯನ್ನು, ಕಲಾವಿದರನ್ನು ಉಳಿಸುವ ಸಲುವಾಗಿ ಪ್ರೇಕ್ಷಕರಿರಬೇಕು. ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಕಲೆ-ಕಲಾವಿದನಿಗೆ ಪರ -ವಿರೋಧ ಈ ಎರಡೂ ವಿಭಾಗಗಳಲ್ಲಿಯೂ ಜನರನ್ನು ಕಾಣುತ್ತೇವೆ. ಒಟ್ಟಿನಲ್ಲಿ ಸನಾತನೀಯವಾದ ಯಕ್ಷಗಾನ ಕಲಾ ಕ್ಷೇತ್ರ ಉಳಿಯಬೇಕು ಎಂಬ ಆಶಯ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ :- ಯಕ್ಷಗಾನದ ಆಳವಾದ ಅಧ್ಯಯನ. ಅದಕ್ಕಾಗಿ ಮುಮ್ಮೇಳದೊಂದಿಗೆ ಹಿಮ್ಮೇಳವನ್ನೂ ಕರಗತ ಮಾಡಿಕೊಂಡು ಯಕ್ಷಗಾನದ ಪೂರ್ಣ ಪ್ರಮಾಣದಲ್ಲಿ ಕಲೆಯನ್ನು ಕಲಿಯುವ ಹಂಬಲ.
ಪಣಂಬೂರು ಮಕ್ಕಳ ಮೇಳ, ಶಾರದಾ ಯಕ್ಷಗಾನ ಕೇಂದ್ರ ಉರ್ವಸ್ಟೋರ್, ಸನಾತನ ಯಕ್ಷಾಲಯ ರಿ. ಮಂಗಳೂರು, ಪಿ.ವಿ ಐತಾಳ್ ಇಂಗ್ಲಿಷ್ ಯಕ್ಷಗಾನ ಬಳಗ ಕುಳಾಯಿ, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಬಾಳ ಕಾಟಿಪಳ್ಳ, ಶ್ರೀ ದುರ್ಗಾಂಬ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲ್, ಯಕ್ಷಾರಾಧನ ಕಲಾಕೇಂದ್ರ ಉರ್ವಸ್ಟೋರ್ ಮೇಳದಲ್ಲಿ ತಿರುಗಾಟವನ್ನು ಮಾಡಿದ್ದಾರೆ ವೃಂದಾ.
ಸನ್ಮಾನ ಹಾಗೂ ಪ್ರಶಸ್ತಿಗಳು:-
ಗೋವಿಂದ ದಾಸ್ ನಲ್ಲಿ ವ್ಯಾಸಂಗ ಮಾಡುವಾಗ ರಾಷ್ಟ್ರ ಮಟ್ಟದ ನಾಟಕದಲ್ಲಿ ಪ್ರಶಸ್ತಿ ದೊರೆತು ಅಂತರ್ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಗಿರುತ್ತಾರೆ.
ಬೆಂಗಳೂರಿನ ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ನೀಡುವ “ಕರ್ನಾಟಕ ಚೇತನ” ರಾಜ್ಯ ಪ್ರಶಸ್ತಿ.
ಅನೇಕ ಸ್ಪರ್ಧೆಗಳಲ್ಲಿ 550ಕ್ಕೂ ಹೆಚ್ಚು ಪ್ರಶಸ್ತಿಗಳು.
ಅಖಿಲ ಕರ್ನಾಟಕ ಬ್ರಾಹ್ಮಣ ಅಸೋಸಿಯೇಷನ್ ಇವರಿಂದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ.
2015ರಲ್ಲಿ ಕಲಾ ಸಂಗಮ ವೇದಿಕೆ ಮಂಗಳೂರು ನೀಡುವ “ಕಲಾ ಸಂಗಮ ಪುರಸ್ಕಾರ”.
ಯಕ್ಷ ಧ್ರುವ ಪಟ್ಲ ಫೌಂಡೇಶನ್ ನಿಂದ ಚಿನ್ನದ ಪದಕ.
ಮೂಡಬಿದ್ರೆಯಲ್ಲಿ ನಡೆದ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ “ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ”.
2018ರಲ್ಲಿ ಮಡಿಲು ಸನ್ಮಾನ ಪುರಸ್ಕಾರ.
2019 ತೌಳವ ಕುಮಾರಿ ಪ್ರಶಸ್ತಿ.
2019 ರೋಟರಿ ಯುವ ಸಾಧಕ ಪ್ರಶಸ್ತಿ.
ಹಾಗೂ 150ಕ್ಕೂ ಅಧಿಕ ಸಂಘ ಸಂಸ್ಥೆಗಳು ಇವರ ಪ್ರತಿಭೆಯನ್ನು ನೋಡಿ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ವೃಂದಾ ಕೊನ್ನಾರ್ ಬಗ್ಗೆ ಪ್ರಕಟಗೊಂಡಿರುವ ಲೇಖನಗಳು:-
ನಾಟ್ಯಕ್ಕೆ ಸೈ ,ಕ್ರೀಡೆಗೂ ಜೈ ಸಕಲ ಕಲಾ ವೃಂದಾ – (ನವೀನ್ ಭಟ್ ಇಳಂತಿಲ ,ಪ್ರಜಾವಾಣಿ 27.11.2012).
ಯಕ್ಷಗಾನ ವೃಂದಾ ಸಾಧನೆ –(ಸ್ವಾತಿ ಸುಬ್ರಹ್ಮಣ್ಯ , ವಿಜಯವಾಣಿ 2013).
ನಾಟ್ಯಕ್ಕೆ ಸೈ ,ಕ್ರೀಡೆಗೂ ಜೈ ಸಕಲ ಕಲಾ ವೃಂದಾ- ಯಕ್ಷಪ್ರಭಾ ಮಾಸ ಪತ್ರಿಕೆ (ಜೂನ್ 2014 ).
ಬಹುಮುಖಿ ಪ್ರತಿಭಾ ವೃಂದಾ –(ಯಕ್ಷಲೋಕದ ವನಿತೆಯರು -100; – ತಾರನಾಥ ವರ್ಕಾಡಿ, ಪ್ರಜಾವಾಣಿ 08.07.2014).
ಕಲಾ ಕ್ಷೇತ್ರದ ಸಾಧಕಿ ವೃಂದಾ ಕೊನ್ನಾರ್ – ಟೈಮ್ಸ್ ಆಫ್ ಬೆದ್ರ 2016.
ಕಲೆಯ ಬೃಂದಾವನದಲ್ಲಿ ವೃಂದಾ ಹೊಳಪು –(ಕೀರ್ತಿಕ್ ಗೌಡ ದರ್ಬೆ, ಪ್ರಜಾವಾಣಿ 02.05.2017).
ಕಲಾಕ್ಷೇತ್ರಕ್ಕೆ ವರವಾದ ವೃಂದಾ –(ಸುದೇಶ್ ಜೈನ್ ಮಕ್ಕಿಮನೆ, ವಿಜಯವಾಣಿ 1.06.2017).
ಕಲಾ ಕ್ಷೇತ್ರದ ಯುವ ತಾರೆ ವೃಂದಾ ಕೊನ್ನಾರ್ –(ಸುದೇಶ್ ಜೈನ್ ಮಕ್ಕಿಮನೆ, ವಿಜಯ ಕರ್ನಾಟಕ 10.06.2017).
ಕಲಾ ಕ್ಷೇತ್ರದಲ್ಲಿ ವೃಂದಾ, ಸಕಲ ಕಲಾ ವಲ್ಲಭೆ –(ಕೀರ್ತಿಕ್ ಗೌಡ ದರ್ಬೆ, ಹೊಸ ದಿಗಂತ 11 .10.2017).
ಪ್ರತಿಭಾ ವೃಂದ ಮಂದಾರ – ವೃಂದಾ ಕೊನ್ನಾರ್ (ಸಂದೀಪ್ ಕೆ , ಪ್ರಜಾವಾಣಿ 13.06.2019).
ಬಹು ಪ್ರತಿಭೆಯ ವೃಂದಾ – (ಸಂತೋಷ್ ರಾವ್ ಪೆರ್ಮುಡ, ಪ್ರಜಾವಾಣಿ 01.08.2019).
ಕಲಾ ಕ್ಷೇತ್ರದ ಧ್ರುವ ತಾರೆ ವೃಂದಾ ಕೊನ್ನಾರ್ (ಸಂತೋಷ್ ರಾವ್ ಪೆರ್ಮುಡ, ವಿಶ್ವವಾಣಿ 20.08.2019).
ಸುಭಾಷಿತಕ್ಕೆ ಕಲಶಪ್ರಾಯವಾದ ಬಹುಮುಖಿ ಪ್ರತಿಭೆ ಕು। ವೃಂದಾ ಬೈಕಂಪಾಡಿ – (ರೋನಿಡಾ ಮುಂಬೈ , ದೆಹಲಿ ವಾರ್ತೆ 07.09.2019).
ಕಲಾ ಲೋಕದ ಮಿಂಚು – (ಸಂತೋಷ್ ರಾವ್ ಪೆರ್ಮುಡ, ವಿಜಯವಾಣಿ ಕಡಲು 06.11.2019).
ವಿವಿಧ ರೀತಿಯ ಚಿತ್ರಕಲೆ, ಕ್ಲೇ ಮಾಡೆಲಿಂಗ್, ಭಾಷಣ – ನಿರೂಪಣೆ, ನಾಟಕ, ಓದುವುದು ಇವರ ಹವ್ಯಾಸಗಳು.
ಅಪ್ಪ ಹಾಗೂ ಅಮ್ಮ, ತಮ್ಮ ಸ್ಕಂದ ಕೊನ್ನಾರ್ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನ ಹಾಗೂ ಆಶೀರ್ವಾದದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ವೃಂದಾ.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು